ಆರೋಗ್ಯ ಸಮಸ್ಯೆಗಳಿಗೆ ಬೆಳ್ಳುಳ್ಳಿ ರಾಮಬಾಣ..!

ಬೆಳ್ಳುಳ್ಳಿಯಲ್ಲಿ ಕಂಡುಬರುವ ಪೋಷಕಾಂಶಗಳಿವು.. ಬೆಳ್ಳುಳ್ಳಿಯಲ್ಲಿ ಖನಿಜಾಂಶಗಳು, ವಿಟಮಿನ್ಗಳು ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳು ಹೇರಳವಾಗಿ ಕಂಡುಬರುತ್ತವೆ ಎನ್ನುತ್ತಾರೆ ಡಾ. ಕಲಾ. ಅಲ್ಲದೆ, ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ (NCBI) ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂಬ ಸಂಯುಕ್ತವು ಕಂಡುಬರುತ್ತದೆ. ಇದು ಔಷಧೀಯ ಗುಣಗಳಾದ ಆಂಟಿಬ್ಯಾಕ್ಟೀರಿಯಲ್, ಆ್ಯಂಟಿಟಿವೈರಲ್, ಆ್ಯಂಟಿಫಂಗಲ್ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೇರಳವಾಗಿ ಹೊಂದಿದೆ ಎಂದು ತಿಳಿಸಿದೆ
ಸಿ ಬೆಳ್ಳುಳ್ಳಿ ತಿಂದರೆ ಏನು ಪ್ರಯೋಜನ? ಹಸಿ ಬೆಳ್ಳುಳ್ಳಿಯ ಸೇವನೆಯು ಬೇಯಿಸಿದ ಬೆಳ್ಳುಳ್ಳಿಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಡಾ.ಕಲಾ ಅವರ ಅಭಿಪ್ರಾಯ. ಹಸಿ ಬೆಳ್ಳುಳ್ಳಿಯನ್ನು ಸೇವಿಸಿದಾಗ, ಅಲಿಸಿನ್, ಡಿಲ್ಲಿ ಡೈಸಲ್ಫೈಡ್, ಎಸ್-ಅಲೈಲ್ ಸಿಸ್ಟೈನ್ನಂತಹ ಸಂಯುಕ್ತಗಳು ಉತ್ಪತ್ತಿಯಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ.
*ಕರುಳಿನ ಆರೋಗ್ಯಕ್ಕೆ ಒಳ್ಳೆಯದು.: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯ ಒಂದು ಎಸಳನ್ನು ಅಗಿದು ತಿಂದರೆ ಕರುಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದು ಅಜೀರ್ಣ, ಮಲಬದ್ಧತೆಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ.
*ಮಧುಮೇಹ ನಿಯಂತ್ರಣ: ಮೂತ್ರಪಿಂಡಗಳಿಗೆ ಆರೋಗ್ಯ.. ಕಾಂಪ್ಲಿಮೆಂಟರಿ ಮತ್ತು ಇಂಟಿಗ್ರೇಟಿವ್ ಹೆಲ್ತ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮಧುಮೇಹಿಗಳು ಬೆಳಗಿನ ಉಪಾಹಾರದಲ್ಲಿ ಅಥವಾ ಬೆಳಗ್ಗೆ ಹೊತ್ತಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿದರೆ, ಅವರ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ.
*ಸೋಂಕುಗಳು ಮತ್ತು ಅಲರ್ಜಿಯಿಂದ ಉಪಶಮನ: ಬೆಳ್ಳುಳ್ಳಿಯಲ್ಲಿರುವ ‘ಅಲಿಸಿನ್’ ಅಂಶವು ದೇಹದ ಆಂತರಿಕ ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಶೀತ, ಕೆಮ್ಮು, ಅಸ್ತಮಾ, ಮೂತ್ರ, ಯೋನಿ, ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿರುವಾಗ ಬೆಳಗ್ಗೆ ಒಂದು ಬೆಳ್ಳುಳ್ಳಿ ಎಸಳನ್ನು ಸೇವಿಸಿದಲ್ಲಿ ಸೋಂಕಿನಿಂದ ಪಾರಾಗಬಹುದು