ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಮುಖ್ಯ 5 ಆಸನಗಳು:

  • ಮಕ್ಕಳ ಮತ್ತು ವಿದ್ಯಾರ್ಥಿಗಳ ಆರೋಗ್ಯ ಸುಧಾರಿಸಲು, ಏಕಾಗ್ರತೆ ಹೆಚ್ಚಿಸಿಕೊಳ್ಳಲು ಮತ್ತು ಜ್ಞಾಪಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯಾವೆಲ್ಲಾ ಆಸನಗಳನ್ನು ಮಾಡಿದರೆ ಮಕ್ಕಳ ಮತ್ತು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಲಿದ್ದೇವೆ. ಇದನ್ನು ಓದಿ
  • 1)ಪದ್ಮಾಸನ :ಪದ್ಮಾಸನ ಅಥವಾ ಕಮಲದ ಭಂಗಿಯು ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಕ್ಕಳ ಮನಸ್ಸನ್ನು ಶಾಂತಗೊಳಿಸುತ್ತದೆ. ಈ ಭಂಗಿಯು ವಿದ್ಯಾರ್ಥಿಗಳನ್ನು ಹೆಚ್ಚು ಜಾಗರೂಕರನ್ನಾಗಿ ಮಾಡುತ್ತದೆ. ವಿದ್ಯಾರ್ಥಿಗಳ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಮಕ್ಕಳ ದೇಹವನ್ನು ಸಹ ಸಡಿಲಗೊಳಿಸುತ್ತದೆ
  • 2)ಸರ್ವಂಗಾಸನ; ಇದ್ದನ್ನು ಎಲ್ಲಾ ಆಸನಗಳ ತಾಯಿ ಎಂದೂ ಕರೆಯುತ್ತಾರೆ. ಈ ಆಸನವು ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ. ಯೋಗ ಪಠ್ಯದ ಪ್ರಕಾರ, ಸರ್ವಂಗಾಸನವು ವಿದ್ಯಾರ್ಥಿಗಳ ದೇಹದ ಎಲ್ಲಾ ಚಕ್ರಗಳು ಮತ್ತು ಅಂಗಗಳನ್ನು ತೊಡಗಿಸುತ್ತದೆ. ಇದು ಅತ್ಯಂತ ಹಳೆಯ ಮತ್ತು ಹೆಚ್ಚು ಚಿಕಿತ್ಸಕ ಯೋಗವಾಗಿದೆ.
  • 3)ಪಶ್ಚಿಮೋತ್ಥಾಸನ:ಏಕಾಗ್ರತೆಯನ್ನು ಹೆಚ್ಚಿಸಲು ಪಶ್ಚಿಮೋತ್ತಾಸನ ಅಥವಾ ಕುಳಿತು ಮುಂದಕ್ಕೆ ಬಾಗುವ ಭಂಗಿ ಅತ್ಯುತ್ತಮವಾದ ಭಂಗಿಗಳಲ್ಲಿ ಒಂದಾಗಿದೆ. ಇದನ್ನು ಮಾಡುವುದರಿಂದ ವಿದ್ಯಾರ್ಥಿಗಳ ಮನಸ್ಸು ಶಾಂತವಾಗುತ್ತದೆ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ
  • 4)ಪಾದಹಸ್ತಾಸನ:
  • ಪಾದಹಸ್ತಾಸನ ಅಥವಾ ನಿಂತು ಮುಂದಕ್ಕೆ ಬಾಗುವ ಭಂಗಿಯನ್ನು ಮಾಡುವುದರಿಂದ ನಿಮ್ಮ ನರಮಂಡಲಕ್ಕೆ ಹೆಚ್ಚು ಶಕ್ತಿಯನ್ನು ತುಂಬುತ್ತದೆ. ನಿಮ್ಮ ಮೆದುಳಿಗೆ ಸರಾಗವಾಗಿ ರಕ್ತದ ಸಂಚಾರ ಮಾಡುವುದಕ್ಕೆ ಸಹಕರಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ.
  • 5)ಹಾಲಾಸನ:
  • ಹಾಲಾಸನ ಅಥವಾ ನೇಗಿಲು ಭಂಗಿಯನ್ನು ದಿನನಿತ್ಯ ಮಾಡುವುದರಿಂದ ಮಕ್ಕಳಲ್ಲಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಕ್ಕಳ ಮನಸ್ಸನ್ನು ಶಾಂತಗೊಳಿಸುತ್ತದೆ.
Share this Article
Subscribe
Notify of
guest
0 Comments
Inline Feedbacks
View all comments
error:

Join Our

Group