ಮಕ್ಕಳಿಗೆ ಅಜೀರ್ಣದಿಂದ ಆಗುವ ಹೊಟ್ಟೆನೋವಿಗೆ ಮನೆಮದ್ದು ;

ಹೊಟ್ಟೆ ನೋವು ಅಥವಾ ಅಸಿಡಿಟಿ ಸಮಸ್ಯೆಯಿದ್ದರೆ ಅದು ಇನ್ನಿಲ್ಲದಂತೆ ಕಾಪಾಡಲು ಇಂತಹ ಮನೆಮದ್ದು ಉಪಕಾರಿ
೧. ತುಳಸಿ: ತುಳಸಿ ಎಲೆಗಳನ್ನು ಹಸಿಯಾಗಿ ಜಗಿಯಬಹುದು ಅಥವಾ ಚಹಾಗೆ ಹಾಕಿ ಕುಡಿಯಬಹುದು. ಇದು ಅಸಿಡಿಟಿಯನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ನಿವಾರಿಸುತ್ತದೆ.
2.ದಾಲ್ಚಿನ್ನಿ :ದಾಲ್ಚಿನ್ನಿಯನ್ನು ಸಾಂಬಾರ ಪದಾರ್ಥಗಳಲ್ಲಿ ಪ್ರಮುಖವಾಗಿ ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ಇರುವಂತಹ ಪ್ರಮುಖ ಗುಣವೆಂದರೆ ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
3.ಜೀರಿಗೆ: ಜೀರಿಗೆ ಇದು ಲಾಲಾರಸವನ್ನು ಹೆಚ್ಚಿಸುವ ಅಂಶಗಳನ್ನು ತನ್ನಲ್ಲಿ ಹೊಂದಿರುವುದರಿಂದಾಗಿ ಜೀರ್ಣಶಕ್ತಿಯನ್ನು ಪ್ರಚೋದಿಸುತ್ತದೆ. ಇದು ನಮ್ಮ ಚೈತನ್ಯವನ್ನು ಹೆಚ್ಚಿಸಿ, ಗ್ಯಾಸನ್ನು ಹೊಡೆದೋಡಿಸುತ್ತದೆ ಹಾಗು ಗ್ಯಾಸ್ ಟ್ರಬಲ್ ಬರದಂತೆ ಕಾಪಾಡುತ್ತದೆ.
4.ಶುಂಠಿ: ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಶುಂಠಿಯು ಹೊಟ್ಟೆಯ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅತಿಯಾಗಿ ಶುಂಠಿ ಸೇವನೆ ಮಾಡಿದರೆ ಇದರಿಂದ ಅಡ್ಡಪರಿಣಾಮ ಉಂಟಾಗಬಹುದು. ಇದು ತುಂಬಾ ಬಲವಾಗಿರುವ ಕಾರಣದಿಂದಾಗಿ ಶುಂಠಿ ಸೇವನೆ ಮಾಡುವಾಗ ಗಮನವಿರಲಿ
5.ಲವಂಗ: ಇದರಲ್ಲಿ ಸ್ವಾಭಾವಿಕವಾದ ಕಾರ್ಮಿಟಿವ್‍ಗಳಿದ್ದು, ಇದು ಪೆರಿಸ್ಟಲಿಸಿಸ್ ( ಅನ್ನನಾಳದ ಮುಖಾಂತರ ಆಹಾರವು ಜಠರ ಸೇರುವ ಪ್ರಕಿಯೆ) ಅನ್ನು ಇದು ಹೆಚ್ಚಿಸುತ್ತದೆ. ಇದಲ್ಲದೆ ಇದು ಲಾಲಾರಸವನ್ನು ಸಹ ಹೆಚ್ಚು ಮಾಡುತ್ತದೆ. ಇದು ಸ್ವಲ್ಪ ಕಟುವಾದ ಘಾಟು ರೀತಿಯ ರುಚಿಯನ್ನು ಹೊಂದಿದೆ. ಇದರ ರುಚಿಯನ್ನು ನೊಡುವುದರಿಂದ ನಮ್ಮ ರುಚಿಗ್ರಂಥಿಗಳು ಸಕ್ರಿಯಗೊಂಡು, ಲಾಲಾರಸವನ್ನು ಹೆಚ್ಚಿಗೆ ಉತ್ಪಾದಿಸುತ್ತವೆ.
6.ಪುದೀನಾ: ಇದನ್ನು ಬಹು ಹಿಂದಿನ ಕಾಲದಿಂದಲು ಬಾಯಿ ದುರ್ವಾಸನೆಯನ್ನು ತೊಲಗಿಸಲು ಬಳಸುತ್ತಿದ್ದಾರೆ. ಇದರ ಜೊತೆಗೆ ಹಲವಾರು ಆಹಾರಗಳ ತಯಾರಿಕೆಯಲ್ಲಿ ಸಹ ಇದು ಅತ್ಯಾವಶ್ಯಕ. ಇದೊಂದು ಅದ್ಭುತ ಗುಣಗಳನ್ನು ಹೊಂದಿರುವ ಎಲೆಯಾಗಿದೆ. ಅಸಿಡಿಟಿಯಿಂದ ವಿಮುಕ್ತಿ ಹೊಂದಲು ಇದು ನೆರವಾಗುತ್ತದೆ.
7.ಏಲಕ್ಕಿ:.ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು ಏಲಕ್ಕಿಯ ಬೀಜ ಮತ್ತು ಜೀರಿಗೆ ಕುದಿಸಿದ ನೀರು ಒಂದು ವೇಳೆ ಅಜೀರ್ಣದ ಕಾರಣ ಹೊಟ್ಟೆನೋವಾಗಿದ್ದರೆ (ಅಜೀರ್ಣದ ಸುಲಭ ಸಂಕೇತವೆಂದರೆ ಊಟದ ಬಳಿಕ ಹೊಟ್ಟೆಯಲ್ಲಿ ಆಹಾರ ಗುಡುಗುಡು ಓಡಿದಂತಾಗುವುದು) ಇದಕ್ಕೆ ಏಲಕ್ಕಿಯ ಬೀಜ ಉತ್ತಮ ಪರಿಹಾರವಾಗಿದೆ.