ಮಧುಮೇಹಿಗಳು ಯಾವ ಹಣ್ಣುಗಳನ್ನು ತಿನ್ನಬಹುದು?

ಮಧುಮೇಹ ಬಂತೆಂದರೆ ಹಣ್ಣು ತಿನ್ನುವ ಕಾಲ ಮುಗಿಯಿತು ಎಂದು ಪೇಚಾಡುವ ಕಾಲ ಒಂದಿತ್ತು.ಇಂದು ಮಧುಮೇಹಿಗಳೂ ಹಣ್ಣುಗಳನ್ನು ತಿನ್ನಬಹುದು ಎಂಬ ಅರಿವು ಮಧುಮೇಹಿಗಳಿಗೆ ಸಂತೋಷ ನೀಡಿದೆ. ಆದರೆ ಯಾವ ಹಣ್ಣು ತಿನ್ನಬೇಕು, ಯಾವುದನ್ನು ತಿನ್ನಬಾರದು,ಯಾವ ಹಣ್ಣನ್ನು ಮಿತವಾಗಿ ತಿನ್ನಬೇಕು ಎಂಬ ತಿಳುವಳಿಕೆ ಇದ್ದರೆ ಒಳ್ಳೆಯದು.ಇವರು ಪ್ರತಿನಿತ್ಯ ಕನಿಷ್ಠ ಒಂದು ಹಣ್ಣನ್ನು ತಿನ್ನಬಹುದು.
- ರಕ್ತದ ಸಕ್ಕರೆಯ ಪ್ರಮಾಣವನ್ನು ಹಠಾತ್ತಾಗಿ ಹೆಚ್ಚಿಸುವುದರಿಂದ ಬಾಳೆಹಣ್ಣು, ಮಾವಿನ ಹಣ್ಣು,ಚಿಕ್ಕು, ದ್ರಾಕ್ಷಿಗಳು ಬೇಡ. ಗೋಡಂಬಿಯಲ್ಲಿ ಅಧಿಕ ಕೊಬ್ಬಿನ ಅಂಶವಿರುವುದರಿಂದ, ಒಣದ್ರಾಕ್ಷಿಯಲ್ಲಿ ಸಕ್ಕರೆಯ ಪ್ರಮಾಣ ಅಧಿಕವಿರುವುದರಿಂದ, ಅವನ್ನು ಸೇವಿಸದಿರುವುದೇ ಒಳ್ಳೆಯದು.
- ನೇರಳೆಹಣ್ಣು:ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.ದೇಹದಲ್ಲಿನ ಸಕ್ಕರೆಯ ಅಂಶ ನಿಯಂತ್ರಿಸುವ ನೇರಳೆಹಣ್ಣು, ದೇಹಕ್ಕೆ ವಿವಿಧ ಪೋಷಕಾಂಶಗಳನ್ನು ಪೂರೈಸುತ್ತದೆ. ರಕ್ತಕಣಗಳ ಹೆಚ್ಚಳಕ್ಕೂ ಪೂರಕವಾಗಿದೆ
- ಕಿತ್ತಳೆ ಹಣ್ಣು: ವಿಟಮಿನ್ ಸಿ ಹೊಂದಿದ್ದು, ಜೀರ್ಣಕ್ರಿಯೆಗೆ ಸಹಕಾರಿ. ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದಲ್ಲದೆ, ಮೂಳೆ ಮತ್ತು ಕೀಲುಗಳಿಗೆ ಶಕ್ತಿ ತುಂಬುವ ಮೂಲಕ ದೇಹವನ್ನು ಬಲಿಷ್ಠಗೊಳಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.
- ದಾಳಿಂಬೆ : ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಎಂಟಿ ಆಕ್ಸಿಡೆಂಟ್ ಅಂಶಗಳಿಂದ ಸಮೃದ್ಧವಾಗಿರುವ ದಾಳಿಂಬೆ ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯಕ್ಕೂ ಪೂರಕವಾಗಿದೆ.
- ರದಲ್ಲಿ ಹಾಗಲಕಾಯಿ ನುಗ್ಗೆ ಎಲೆ, ಮೆಂತ್ಯದ ಸೊಪ್ಪು, ನೋಲ್ ಕೋಲ್ ಇರಲಿ. ಕ್ಯಾರೆಟ್ ಬಿಟ್ರೂಟ್ ಇತರ ತರಕಾರಿಗಳೊಡನೆ ಸೇವಿಸಬಹುದು. ಬಟಾಟೆ ಸಿಹಿಗೆಣಸುಗಳನ್ನು ದೂರವಿಡಿ.ಜೊತೆಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ಮುನ್ನ ಹಸಿ ತರಕಾರಿಯ ಸಲಾಡ್ ಯಥೇಚ್ಛವಾಗಿ ಸೇವಿಸಿ. ಅಧಿಕ ನಾರಿನಂಶ ಮತ್ತು ಕಡಿಮೆ ಕ್ಯಾಲೋರಿ ಇರುವ ಇದು ರಕ್ತದ ಸಕ್ಕರೆಯ ಅಂಶವನ್ನು ನಿಯಂತ್ರಿಸುವುದಲ್ಲದೇ, ಮಲಬದ್ಧತೆಯನ್ನು ದೂರೀಕರಿಸಲು ಸಹಕಾರಿಯಾಗಿದೆ.