ಆರೋಗ್ಯವಾದ ಹೃದಯವನ್ನು ಪಡೆಯಲು 10 ಯೋಗಾಸನಗಳು

ಯೋಗವೆಂದರೆ ವಿವಿಧ ಭಂಗಿಗಳನ್ನು ಮಾಡುತ್ತಾ ಉಸಿರಿನ ಮೇಲೆ ಗಮನವಿಟ್ಟು ವಿಶ್ರಮಿಸುವುದು. ಇದರಿಂದಾಗಿ ಪ್ರತಿಯೊಂದು ಯೋಗಾಸನವೂ ಶ್ವಾಸಕೋಶದ ವ್ಯವಸ್ಥೆಯ ಮೇಲೆ ಒಂದು ನಿರ್ದಿಷ್ಟವಾದ ಪ್ರಭಾವವನ್ನು ಬೀರುತ್ತದೆ
1. ತಾಡಾಸನ: ತಾಡಾಸನ ಅಥವಾ ಪರ್ವತದ ಭಂಗಿಯು ಹೃದಯವನ್ನು ಬಲಿಷ್ಟವಾಗಿಸುವದಲ್ಲದೆ ದೇಹದ ನಮ್ಯತೆಯನ್ನೂ ಹೆಚ್ಚಿಸುತ್ತದೆ..
3. ಉತ್ತಿಥ ಹಸ್ತಪಾದಾಸನಈ ಯೋಗಾಸನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಹೆಚ್ಚು ಏಕಾಗ್ರತೆ ಮತ್ತು ಬಲ ಅವಶ್ಯಕ.
4. ತ್ರಿಕೋನಾಸನ: ಹೃದಯವನ್ನು ತೆರೆಯುವ, ನಿಂತುಕೊಂಡು ಮಾಡಬೇಕಾದ ಭಂಗಿಯಲ್ಲಿ ಮಾಡಬೇಕಾದ ಈ ಆಸನವು ಹೃದಯದ ವ್ಯಾಯಾಮವಾಗಿದೆ. ಆಳವಾಗಿ ಉಸಿರಾಡಿದಾಗ ಎದೆಯ ವಿಸ್ತಾರವಾಗುತ್ತದೆ ಮತ್ತು ಲಯಬದ್ಧವಾದ ಉಸಿರಾಟದಿಂದ ದಾಢ್ರ್ಯತೆ ಹೆಚ್ಚುತ್ತದೆ.
5. ವೀರಭದ್ರಾಸನ: ವೀರಭದ್ರಾಸನ ಅಥವಾ ವೀರ ಭಂಗಿಯು ದೇಹದ ಸಮತೋಲನವನ್ನು ಹೆಚ್ಚಿಸಿ, ದಾಢ್ರ್ಯತೆಯನ್ನೂ ಹೆಚ್ಚಿಸುತ್ತದೆ. ಒತ್ತಡವನ್ನು ಈ ಆಸನವನ್ನು ನಿವಾರಿಸಿ ಮನಸ್ಸನ್ನು ಪ್ರಶಾಂತವಾಗಿಡುವುದರಿಂದ ಹೃದಯದ ಬಡಿತವನ್ನು ನಿಯಂತ್ರಣದಲ್ಲಿ ಇಡುತ್ತದೆ.
6.ಉತ್ಕಟಾಸನ: ಉತ್ಕಟಾಸನ ಅಥವಾ ಕುರ್ಚಿಯ ಭಂಗಿಯಲ್ಲಿ ಹೃದಯದ ಬಡಿತ ಮತ್ತು ಉಸಿರಾಟವೂ ಹೆಚ್ಚಾಗುವುದನ್ನು ಅನುಭವಿಸಬಹುದು. ದೇಹದ ಉಷ್ಣತೆಯನ್ನು ಹೆಚ್ಚಿಸಿ ಬಲವನ್ನೂ ಈ ಆಸನವು ವರ್ಧಿಸುತ್ತದೆ.
7.ಮಾರ್ಜರಿ ಆಸನ: (ಬೆಕ್ಕಿನ ಭಂಗಿ)ಈ ಯೋಗಾಸನವನ್ನು ಉತ್ಕಟಾಸನದ ನಂತರ ಮಾಡುವುದರಿಂದ ಹೃದಯದ ಬಡಿತವು ಮತ್ತೆ ಸಾಮಾನ್ಯ ಸ್ಥಿತಿಗೆ ಬಂದು, ಮೃದುವಾಗಿ ಮತ್ತೆ ಲಯಬದ್ಧವಾಗುತ್ತದೆ.
8. ಅಧೋಮುಖಶ್ವಾನಾಸನ: ಅಧೋಮುಖವಾಗಿ ನೋಡುವ ಈ ಶ್ವಾನದ ಭಂಗಿಯನ್ನು ವಿಶ್ರಮಿಸಲು ಬಳಸುತ್ತಾರೆ. ಇದರಿಂದ ವ್ಯವಸ್ಥೆಯು ಪ್ರಶಾಂತವಾಗಿ, ಶಕ್ತಿಯುತವಾಗಿಯೂ ಆಗುತ್ತದೆ.
9. ಭುಜಂಗಾಸನ: ಈ ಆಸನವು ಎದೆಯ ವಿಸ್ತರಣವನ್ನು ಹೆಚ್ಚಾಗಿ ಮಾಡುತ್ತದೆ ಮತ್ತು ಈ ಆಸನವನ್ನು ಮಾಡಲು ಸ್ಫಿಂಕ್ಸ್ ಭಂಗಿಗಿಂತಲೂ ಹೆಚ್ಚು ಬಲ ಮತ್ತು ದಾಢ್ರ್ಯತೆ ಅವಶ್ಯಕ.
10.ಧನುರಾಸನ: ಇಡಿ ದೇಹವನ್ನು ಪ್ರಚೋದಿಸಿ ವಿಸ್ತರಣಗೊಳಿಸುವ ಧನುರಾಸನವು ಎದೆಯ ಭಾಗವನ್ನು ತೆರೆಯುವುದಲ್ಲದೆ ಅದನ್ನು ಬಲಿಷ್ಟವಾಗಿಯೂ ಮಾಡುತ್ತದೆ.