ದಂತ ಕುಳಿ ಸಮಸ್ಯೆಗೆ ಇಲ್ಲಿವೆ ಮನೆ ಮದ್ದು ..!

ಇಂದಿನ ದಿನಗಳಲ್ಲಿ ಚಿಕ್ಕವರು ದೊಡ್ಡವರು ಎಂಬ ವಯಸ್ಸಿನ ಮಿತಿ ಇಲ್ಲದ ಕಾರಣ ದಂತಕುಳಿ, ವಸಡಿನ ನೋವು, ಇಂತಹ ಗಂಭೀರ ಸಮಸ್ಯೆಗಳಿಂದ ಬಳಲುವಂತಾಗಿದೆ. ಇಂತಹ ಸಮಸ್ಯೆಗಳಿಂದ ದೂರವಾಗಬೇಕು ಅಂದ್ರೆ ಈ ಮನೆಮದ್ದುಗಳನ್ನು ಉಪಯೋಗಿಸಿ. – ಉಪ್ಪನ್ನು ಉಪಯೋಗಿಸುವುದರಿಂದ ಬಾಯಲ್ಲಿರುವ ನೋವು ಮತ್ತು ಬ್ಯಾಕ್ಟೀರಿಯಾ ಬೆಳೆಯೆದಂತೆ ತಡೆಹಿಡಿಯುತ್ತದೆ.
- ಒಂದು ಚಮಚ ಉಪ್ಪುನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು, 5 ಅಥವಾ 10 ನಿಮಿಷಗಳ ಕಾಲ ನೀರನ್ನು ಬಾಯಲ್ಲಿ ಹಾಕಿಕೊಂಡು ಮುಕ್ಕಳಿಸಬೇಕು, ಇದನ್ನು ದಿನಕ್ಕೆ 3 ರಿಂದ 4 ಸಾರಿ ಈ ರೀತಿ ಮಾಡಬೇಕು. ನಿಮಗೆ ನೋವು ಹೆಚ್ಚಾಗಿದ್ದಲ್ಲಿ ದಿನ್ನಕ್ಕೆ 5 ರಿಂದ 6 ಸಲ ಮಾಡಿದರೆ ಉತ್ತಮ. – ಬೆಳ್ಳುಳ್ಳಿಯನ್ನು ಹೆಚ್ಚಾಗಿ ಉಪಯೋಗಿಸ ಬೇಕು ಇದರಲ್ಲಿರುವ ಆಲಿಸಿನ್ ಎಂಬ ಅಂಶವು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ಜೀವಿ ಹಾಗು ಆ್ಯಂಟಿಬಯಾಟಿಕ್ ಗುಣಗಳನ್ನು ಹೊಂದಿರುತ್ತದೆ. 4 ರಿಂದ 5 ಬೆಳ್ಳುಳಿ ಎಸಳುಗಳನ್ನು ಜಜ್ಜಿಕೊಂಡು ಅದಕ್ಕೆ 1/5 ಚಮಚ ಕಲ್ಲುಪ್ಪು ಹಾಕಿ, ನೋವಿರುವ ಹಲ್ಲಿನ ಜಾಗಕ್ಕೆ ಇಟ್ಟುಕೊಳ್ಳಬೇಕು, ನಂತರ 15 ನಿಮಿಷ ಬಿಟ್ಟು ಬಾಯಿ ಮುಕ್ಕಳಿಸಬೇಕು. ದಿನಕ್ಕೆ 2 ರಿಂದ 3 ಸಾರಿ ಹೀಗೆ ಮಾಡಿದರೆ ನೋವಿನ ಭಾದೆಯಿಂದ ಕೊಂಚ ವಿರಾಮ ಹೊಂದಬಹುದು.
- – ಲೈಕೋರೈಸ್ ಬೇರಿನ ಪುಡಿಯನ್ನು ಬಳುಸುವುದರಿಂದ ಹಲ್ಲಿಗೆ ಭಾದೆ ನೀಡುವಂತುವ ಬ್ಯಾಕ್ಟೀರಿಯಾ ಬರದಂತೆ ತಡೆಹಿಡಿಯುತ್ತದೆ. ಇದನ್ನು ಟ್ರಾನ್ಸ್ ಚಾಲೋನು ಎಂದು ಕೂಡ ಕರಿಯುತ್ತಾರೆ. ಈ ಬೇರನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಹಲ್ಲು ಉಜ್ಜಿದರೆ ಇದರಿಂದ ದಂತಕುಳಿಯ ಸಮಸ್ಯೆ ದಿನ ದಿನ ಕಡಿಮೆ ಆಗುತ್ತಾ ಬರುತ್ತೆ. ಬೇವಿನ ಕಡ್ಡಿಯಿಂದ ಹಲ್ಲನು ಉಜ್ಜಬೇಕು. ಇದರಲ್ಲಿರುವ ಆಯುರ್ವೇದಿಕ್ ಗುಣಗಳಿಂದ ದಂತಕುಳಿಗೆ ಪರಿಣಾಮಕಾರಿಯಾಗುತ್ತದೆ.
- – ಲವಂಗವೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ ಇದರಲ್ಲಿರುವ ಯುಜೆನಲ್ ಎಂಬ ಅಂಶ ಹೇರಳವಾಗಿರುವ ಕಾರಣ ಹಲ್ಲಿನಲ್ಲಿ ಆಗುವ ಉರಿಯೂತ, ನಂಜುವಿರೋಧಕ ಗುಣ ಹೊಂದಿದೆ. ನೋವಿರುವ ಜಾಗದಲ್ಲಿ ಲವಂಗವನ್ನು ಇಟ್ಟುಕೊಂಡು ಜಗಿಯಬೇಕು. ಅದರಿಂದ ಬರುವ ರಸವನ್ನು ಬಾಯಿಯಲ್ಲಿ 5 ನಿಮಿಷ ಇಟ್ಟುಕೊಳ್ಳಬೇಕು. ನಾಲಿಗೆಯ ಕೆಳಭಾಗದಲ್ಲಿ ಲವಂಗವನ್ನು ಸ್ವಲ್ಪ ಹೊತ್ತು ಇಟ್ಟುಕೊಳ್ಳುವುದರಿಂದ ನೋವು ಶಮನಗೊಳ್ಳುತ್ತದೆ. ದಂತಕುಳಿಯಿಂದ ದೂರವಿರಬೇಕು ಅಂದರೆ ಸಾಧ್ಯವಾದಷ್ಟು ಕ್ಯಾಲ್ಸಿಯಂ ಮತ್ತು ನಾರಿನ ಅಂಶ ಇರುವ ಆಹಾರ ಮತ್ತು ತರಕಾರಿ ಹೆಚ್ಚಾಗಿ ಸೇವಿಸಬೇಕು.
- ಫ್ಲೋರೈಡ್ ಹೊಂದಿರುವ ಟೂತ್ ಪೇಸ್ಟ್‌ನಿಂದ ದಿನಕ್ಕೆ 2 ಸಾರಿ ಹಲ್ಲು ಉಜ್ಜಬೇಕು. ಊಟ ಮಾಡಿದ ಮೇಲೆ ಬಾಯಲ್ಲಿ ನೀರನ್ನು ಹಾಕಿಕೊಂಡು ಮುಕ್ಕಳಿಸಬೇಕು. ಚಾಕೊಲೇಟ್,ಕ್ಯಾಂಡಿ, ಸ್ವೀಟ್ಸ್, ಸೋಡಾ ಮತ್ತು ಜ್ಯೂಸ ನಂತಹ ಆಹಾರ ಸೇವನೆ ಮಿತವಾಗಿರಲಿ. ಇನ್ನಷ್ಟು ಉಪಯುಕ್ತವಾದ ಮನೆ ಔಷಧಿಗಳನ್ನು ಪಡೆಯಿರಿ