ನಟರಾಜಾಸನದ ಲಾಭಗಳನ್ನು ತಿಳಿಯಿರಿ

ಶಿವನ ರುದ್ರನರ್ತನವನ್ನು ನಟರಾಜ ಭಂಗಿ ಎಂದು ಕರೆಯಲಾಗುತ್ತದೆ. ಹೆಚ್ಚಿನ ನೃತ್ಯಾಭ್ಯಾಸದ ವೇಳೆ ನಟರಾಜನ ಪೂಜೆ ಮಾಡಲಾಗುತ್ತದೆ. ನಟರಾಜ ಎಂದರೆ ನೃತ್ಯದ ದೇವರು ಎಂದು ಹೇಳಲಾಗುತ್ತದೆ. ಅದೇ ನಟರಾಜಾಸನವು ಯೋಗದಲ್ಲಿದೆ. ಇದು ತುಂಬಾ ಲಾಭಕಾರಿ ಕೂಡ ನಟರಾಜಾಸನವು ಕಾಲು ಮತ್ತು ಕೈಗಳನ್ನ ಒಳಗೊಂಡಿರುವಂತಹ ಯೋಗ ಭಂಗಿಯಾಗಿದೆ.
ನಟರಾಜಾಸನದ ಲಾಭಗಳು:
ನಟರಾಜಾಸನವು ಸಮನ್ವಯ ಮತ್ತು ಸಮತೋಲನವನ್ನು ಒಳಗೊಂಡಿದೆ. ಇದು ಭೂಜ, ಬೆನ್ನು, ಕೈಗಳು ಮತ್ತು ಕಾಲುಗಳನ್ನು ನೇರವಾಗಿಸಿ, ಬಲಪಡಿಸುವುದು.ಚಯಾಪಚಯ ಹೆಚ್ಚಿಸುವ ಮೂಲಕ ತೂಕ ಇಳಿಸಲು ಸಹಕಾರಿ.ಈ ಭಂಗಿಯು ಜೀರ್ಣಕ್ರಿಯೆ ವ್ಯವಸ್ಥೆ ನಿಯಂತ್ರಿಸುವುದು.
ಕೈಗಳು, ತೊಡೆ, ಕಾಲುಗಳು, ಮಣಿಗಂಟು ಮತ್ತು ಹೊಟ್ಟೆ ಸಹಿತ ದೇಹದ ವಿವಿಧ ಭಾಗಗಳು ಇದರಿಂದ ಎಳೆಯಲ್ಪಡುವುದು.ದೇಹದ ಸಮತೋಲನ ಮತ್ತು ಭಂಗಿ ಸುಧಾರಣೆ ಮಾಡುವುದು. ಈ ಭಂಗಿಯನ್ನು ಪಾಲಿಸಿದರೆ ಅದರಿಂದ ನೋವು ಮತ್ತು ಸೆಳೆತ ಕಡಿಮೆ ಆಗುವುದು.ಈ ಆಸನವು ಮನಸ್ಸನ್ನು ಆರಾಮಗೊಳಿಸುವುದು, ಒತ್ತಡ ಕಡಿಮೆ ಮಾಡುವುದು ಮತ್ತು ಏಕಾಗ್ರತೆ ಹೆಚ್ಚಿಸುವುದು.ಈ ಆಸನವನ್ನು ನಿಯಮಿತವಾಗಿ ಅಭ್ಯಾಸಿಸಿದರೆ ಅದರಿಂದ ದೇಹವು ಹೆಚ್ಚು ಸ್ಥಿತಿಸ್ಥಾಪಕತ್ವ ಪಡೆಯುವುದು.
ನಟರಾಜಾಸನ ಮಾಡುವುದು ಹೇಗೆ?
ಬೆರಳುಗಳನ್ನು ಜತೆಯಾಗಿರಿಸಿಕೊಂಡು ಹಾಗೆ ನೇರವಾಗಿ ನಿಂತುಕೊಂಡು ಒಂದು ಕೇಂದ್ರದ ಮೇಲೆ ದೃಷ್ಟಿಯನ್ನು ಇರಿಸಿ.ಸ್ವಲ್ಪ ಮುಂದಕ್ಕೆ ಬಾಗಿ ಬಲಗಾಲನ್ನು ಹಿಂದಕ್ಕೆ ತಂದು ಎತ್ತಿ ಬಲಗೈಯಿಂದ ಹಿಡಿಯಿರಿ.ಎಡಕಾಲನ್ನು ನೇರವಾಗಿ ಇಟ್ಟುಕೊಂಡು ಎಡಕೈಯನ್ನು ಮುಂದಕ್ಕೆ ತನ್ನಿ.ಎಡದ ಕೈಯ ತೋರು ಬೆರಳು ಮತ್ತು ಹೆಬ್ಬೆರಳಿನ ಜತೆಗೆ ಮೊಣಕೈಯನ್ನು ಕೂಡ ಮುಂದಿನ ಭಾಗಕ್ಕೆ ತರುವುದು. ಎಡದ ಕೈ ಕಡೆಗೆ ದೃಷ್ಟಿಯನ್ನಿಡಿ.ಇದು ಕೊನೆಯ ಭಂಗಿ ಮತ್ತು ಈ ಭಂಗಿಯಲ್ಲಿ ಸ್ವಲ್ಪ ಹೊತ್ತು ಇರಿ.ಎಡದ ಕೈಯನ್ನು ಈಗ ಕೆಳಗೆ ತನ್ನಿ. ಬಲದ ಕಾಲನ್ನು ಈಗ ಮೊದಲಿನ ಭಂಗಿಗೆ ತನ್ನಿ.ಆರಾಮ ಮಾಡಿ ಮತ್ತು ಇದೇ ಭಂಗಿಯನ್ನು ಮತ್ತೊಂದು ಬದಿಯಿಂದಲೂ ಮಾಡಿ.ಅಭ್ಯಾಸದ ವೇಳೆ ಸಾಮಾನ್ಯವಾಗಿ ಉಸಿರಾಡಿ