ಪಪ್ಪಾಯ ಎಲೆಗಳ ಉಪಯೋಗ ತಿಳಿಯಿರಿ…!

ಹಳ್ಳಿಗಳಲ್ಲಿ ಕಂಡುಬರುವ ಪಪ್ಪಾಯ ಹಣ್ಣಿನ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಪಪ್ಪಾಯ ಹಣ್ಣಿನ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಆದರೆ ಪಪ್ಪಾಯ ಎಲೆಯ ಸೇವನೆಯಿಂದಲೂ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಪಪ್ಪಾಯ ಎಲೆಯ ಸೇವನೆಯಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಹಾಗೂ ಅದರ ಬಳಕೆಯ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.
ಪಪ್ಪಾಯ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಅಲ್ಲದೆ ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ನಮ್ಮ ದೇಹಕ್ಕೆ ಬೇಕಾಗಿರುವ ಪ್ರೋಟಿನ್, ವಿಟಮಿನ್ ಪಪ್ಪಾಯ ಹಣ್ಣಿನಿಂದ ದೊರೆಯುತ್ತದೆ. ಕೆಲವು ಕಡೆ ಪಪ್ಪಾಯ ಗಿಡದ ಎಲೆಯನ್ನು ಔಷಧಿ ತಯಾರಿಕೆಯಲ್ಲಿ ಬಳಸುತ್ತಾರೆ. ಪಪ್ಪಾಯ ಎಲೆಗಳಲ್ಲಿ ಆಂಟಿ ಕ್ಯಾನ್ಸರ್ ಗುಣ ಹೇರಳವಾಗಿರುತ್ತದೆ, ಸಂಶೋಧನೆಯ ಪ್ರಕಾರ ಬ್ರೆಸ್ಟ್ ಕ್ಯಾನ್ಸರ್, ಸರ್ವೈಕಲ್ ಕ್ಯಾನ್ಸರ್, ಲಂಗ್ ಕ್ಯಾನ್ಸರ್ ಗೆ ಕಾರಣವಾಗುವ ವೈರಸ್ ಜೊತೆಗೆ ಹೋರಾಡಿ ವ್ಯಾಧಿ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಪ್ಪಾಯ ಎಲೆಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಪಪ್ಪಾಯ ಎಲೆಗಳಲ್ಲಿ 50 ಆಕ್ಟೀವ್ ಪದಾರ್ಥಗಳು ಇರುತ್ತದೆ. ಕಾರ್ಪಿನ್ ಅನ್ನುವ ಕಂಟೆಂಟ್ ಫಂಗಸ್ ಹಾಗೂ ವಾರ್ಮ್ ಪರಾಣ ಜೀವಿಗಳು ಇತರೆ ಕ್ಯಾನ್ಸರ್ ನಂತಹ ಅತಿ ಸೂಕ್ಷ್ಮವಾದ ಜೀವಗಳು ನಮ್ಮ ದೇಹದಲ್ಲಿ ವೃದ್ಧಿಯಾಗದಂತೆ ವಿರೋಧಿಸುವ ಲಕ್ಷಣಗಳು ಪಪ್ಪಾಯ ಎಲೆಗಳಲ್ಲಿ ಹೆಚ್ಚಾಗಿದೆ. ಈ ಎಲೆಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಎಲೆಗಳಲ್ಲಿ ಆಂಟಿ ಮಲೇರಿಯಾ ಲಕ್ಷಣಗಳು ಹೆಚ್ಚಾಗಿರುತ್ತದೆ. ಈ ಎಲೆಗಳನ್ನು ಸೇವಿಸುವುದರಿಂದ ಪರಿಣಾಮಕಾರಿಯಾಗಿ ಮಲೇರಿಯಾ ರೋಗವನ್ನು ವಾಸಿ ಮಾಡುತ್ತದೆ. ಪಪ್ಪಾಯ ಎಲೆಯ ರಸವನ್ನು ಕುಡಿಯುವುದರಿಂದ ಮಲೇರಿಯಾ, ಡೆಂಗ್ಯೂ ಖಾಯಿಲೆಗಳು ಬೇಗ ನಿವಾರಣೆಯಾಗುತ್ತದೆ. ಡೆಂಗ್ಯೂ ವೈರಸ್ ನಿಂದ ಲಿವರ್ ಡ್ಯಾಮೇಜ್ ಆಗದಂತೆ ಅಲ್ಲದೆ ಬ್ಲಡ್ ಕ್ಲೊಟ್ ಆಗದಂತೆ ನೋಡಿಕೊಳ್ಳುತ್ತದೆ.ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಖಾಯಿಲೆ, ಅಜೀರ್ಣ ಇರುವವರು ಪಪ್ಪಾಯ ಎಲೆಯ ರಸವನ್ನು ಕುಡಿಯುವುದು ಒಳ್ಳೆಯದು. ಪಪ್ಪಾಯ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪೌಡರ್ ಮಾಡಿ ಅದಕ್ಕೆ ನೀರನ್ನು ಸೇರಿಸಿ ಪೇಸ್ಟ್ ರೀತಿ ಮಾಡಿಕೊಂಡು ಮೊಡವೆಗಳಿಗೆ ಹಚ್ಚುವುದರಿಂದ ಮೊಡವೆಗಳು, ಮೊಡವೆ ಕಲೆಗಳನ್ನು ನಿವಾರಿಸಲು ಬಹಳ ಸಹಾಯವಾಗುತ್ತದೆ.