ಜ್ವರಕ್ಕೆ ಮನೆಮದ್ದು

ನಮ್ಮ ದೇಹದ ಉಷ್ಣತೆಯು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾದರೆ ಅದನ್ನು ಜ್ವರವೆಂದು ಕರೆಯುತ್ತಾರೆ. ಜ್ವರವು ಸಾಮಾನ್ಯವಾಗಿ ಸೋಂಕಿನ ಲಕ್ಷಣವಾಗಿರುತ್ತದೆ. ಆರಂಭದ ಹಂತದಲ್ಲಿರುವ ಜ್ವರವನ್ನು ಮನೆ ಮದ್ದು ಬಳಸಿ ಯಶಸ್ವಿಯಾಗಿ ನಿಯಂತ್ರಿಸಬಹುದು. ದೇಹದ ಉಷ್ಣತೆಯು ಹೆಚ್ಚಾದಲ್ಲಿ ಜನರು ತೀವ್ರವಾದ ಚಳಿಯನ್ನು ಅನುಭವಿಸುತ್ತಾರೆ. ಇದನ್ನು ಚಳಿ ಜ್ವರವೆಂದೂ (chills) ಕರೆಯುತ್ತಾರೆ.ನಾವು ಸೇವಿಸುವ ಆಹಾರ, ವ್ಯಾಯಾಮ, ನಿದ್ರೆ, ದಿನದ ಸಮಯ ಮತ್ತು ಇನ್ನಿತರ ಅಂಶಗಳು ದೇಹದ ಉಷ್ಣತೆಯ ಮೇಲೆ ಪರಿಣಾಮ ಬೀರಬಲ್ಲವು.ದೇಹಕ್ಕೆ ಸೋಂಕು ತಗಲಿದಾಗ ದೇಹದ ರಕ್ಷಣಾ ವ್ಯವಸ್ಥೆ (immune system) ಸೋಂಕು ಕಾರಕಗಳ ಮೇಲೆ ಧಾಳಿಮಾಡಿ ಸೋಂಕನ್ನು ನಿವಾರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹದ ಉಷ್ಣತೆಯ ಹೆಚ್ಚುವಿಕೆ ಒಂದು ಸಾಮಾನ್ಯ ಪ್ರಕ್ರಿಯೆಯಾಗಿರುತ್ತದೆ.ಜ್ವರವು ಸಾಮಾನ್ಯವಾಗಿ ಕೆಲ ದಿನಗಳಲ್ಲಿ ತನ್ನಿಂದ ತಾನಾಗಿ ವಾಸಿಯಾಗುತ್ತದೆ. ಅದಲ್ಲದೆ ದೇಹದ ಉಷ್ಣತೆಯು ಅತಿಯಾಗಿ ಹೆಚ್ಚಿದಲ್ಲಿ ಇದು ತೀವ್ರ ಸೋಂಕಿನ ಲಕ್ಷಣವಾಗಿದ್ದು ಇದಕ್ಕೆ ವೈದ್ಯಕೀಯ ಚಿಕಿತ್ಸೆಯು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರು ಜ್ವರದ ಮೂಲಕಾರಣಕ್ಕೆ ಅನುಗುಣವಾಗಿ ಮತ್ತು ಜ್ವರದ ತೀವ್ರತೆ ಕಡಿಮೆ ಮಾಡಲು ಔಷಧಿಗಳ ಸೇವನೆಗೆ ನಿರ್ದೇಶಿಸಬಹುದು.

ಜ್ವರದ ಸಾಮಾನ್ಯ ಚಿಕಿತ್ಸೆ :ಜ್ವರವು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಒಂದು ಪ್ರತಿರೋಧವಾಗಿರುತ್ತದೆ. ಇದು ದೇಹಕ್ಕೆ ಸೇರುವ ಬ್ಯಾಕ್ಟಿರಿಯಾ, ವೈರಸ್ ಹಾಗು ಇತರ ರೋಗಕಾರಕಗಳ ವಿರುದ್ಧ ಹೋರಾಡಿ ಅವುಗಳನ್ನು ನಾಶಪಡಿಸಿ ದೇಹವನ್ನು ಯಾವುದೇ ರೋಗ ಬಾರದಂತೆ ಕಾಪಾಡುವ ಒಂದು ಪ್ರಕ್ರಿಯೆಯ ಭಾಗವಾಗಿರುತ್ತದೆ. ಹೆಚ್ಚಿನ ಜ್ವರಗಳು ನಮಗೆ ಅಹಿತಕರವಾದ ಅನುಭವವನ್ನು ನೀಡಿ ಜ್ವರದ ತೀವ್ರತೆ ಹೆಚ್ಚಾದಲ್ಲಿ ಇರುವ ಆರೋಗ್ಯ ತೊಂದರೆಯನ್ನು ಮತ್ತಷ್ಟು ಉಲ್ಬಣಗೊಳಿಸಿ ಜಟಿಲತೆಗೆ ಕಾರಣವಾಗಬಲ್ಲುದು. ಈ ಕಾರಣಕ್ಕಾಗಿ ವೈದ್ಯರು ಕೆಲವೊಮ್ಮೆ ಜ್ವರ ಶಾಮಕ ಔಷಧಿಗಳನ್ನ ನೀಡಿ ದೇಹದ ತಾಪಮಾನವನ್ನು ಕಡಿಮೆ ಮಾಡುತ್ತಾರೆ. ಜ್ವರದಲ್ಲಿ ರೋಗಿಯು ತೀವ್ರವಾಗಿ ಬೆವರುತ್ತಿದ್ದರೆ ಕೆಲವೊಮ್ಮೆ ದೇಹದಲ್ಲಿನ ಜಲಾಂಶದ ಕೊರತೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಹೆಚ್ಚಿನ ನೀರಿನ ಸೇವನೆಯು ಅತ್ಯಗತ್ಯ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group