ಏಪ್ರಿಲ್ 25 ವಿಶ್ವ ಮಲೇರಿಯಾ ದಿನ ;

ವಿಶ್ವ ಮಲೇರಿಯಾ ದಿನ ಎಂದು ಪ್ರತಿ ವರ್ಷ ಎಪ್ರೀಲ್ 25ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿಸಿ ಅರಿವು ಮೂಡಿಸಿ ರೋಗದ ಬಗ್ಗೆ ಜಾಗ್ರತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು
ರೋಗದ ಲಕ್ಷಣಗಳು; ವಿಪರೀತ ಜ್ವರ, ನಡುಗುವಿಕೆ, ಗಂಟು ಅಥವಾ ಕೀಲುನೋವು, ವಾಂತಿ, ರಕ್ತಹೀನತೆ, ತಲೆ ಸುತ್ತುವುದು, ಉಸಿರು ಕಟ್ಟುವಿಕೆ ಮತ್ತು ಹೃದಯ ಸ್ಪಂಧನಾಧಿಕ್ಯ ಮುಂತಾದುವುಗಳು ಕಾಣಿಸಿಕೊಳ್ಳುತ್ತದೆ. ರೋಗದತೀವ್ರತೆ ಜಾಸ್ತಿಯಾದಲ್ಲಿ ಅಕ್ಷಿಪಟಲದ ಹಾನಿ, ಸೆಳೆತ ಅಥವಾ ಅಪಸ್ಮಾರ ಮತ್ತು ಮೂತ್ರದಲ್ಲಿ ರಕ್ತ ಬರುವ ಸಾಧ್ಯತೆಯೂ ಇದೆ.
ತಡೆಗಟ್ಟುವುದು ಹೇಗೆ?
1. ಸೊಳ್ಳೆಗಳ ನಿಯಂತ್ರಣಕ್ಕಾಗಿ, ಮನೆಯ ಸುತ್ತಮುತ್ತಲಿನ ಆವರಣಗಳಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು:
ನಿಂತ ನೀರಲ್ಲಿ ಅನಾಫೆಲಿಸ್ ಸೊಳ್ಳೆ ಮರಿಗಳು ಬೆಳೆದು ರೋಗ ವರ್ಧನೆ ಕಾರಣವಾಗಬಹುದು. ಎಳನೀರು ಚಿಪ್ಪುಗಳನ್ನು ಕವಚಿ ಹಾಕಬೇಕು ಅಥವಾ ನಾಶಪಡಿಸಬೇಕು. ಟಯರ್‍ಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು.
2. ಹೂದಾನಿಗಳ ಕೆಳತಟ್ಟೆಗಳನ್ನು ಆಗಾಗ ಶುಚಿಗೊಳಿಸಬೇಕು: ಹಳ್ಳಿ ಪ್ರದೇಶಗಳಲ್ಲಿ ಉಪಯೋಗಿಸದೇ ಇರುವ ಕಡೆಯುವ ಕಲ್ಲುಗಳು, ಖಾಲಿ ತಟ್ಟೆಗಳು ಕ್ಯಾನ್‍ಗಳನ್ನು ಮತ್ತು ಬಕೆಟ್‍ಗಳನ್ನು ಬೋರಲಾಗಿ ಹಾಕಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನತೊಟ್ಟಿ, ಟ್ಯಾಂಕ್ ಮತ್ತು ಬಾವಿಗಳಿಗೆ ಸೊಳ್ಳೆ ವ್ಮರಿಗಳನ್ನು ತಿನ್ನುವಗಪ್ಪಿ ಮತ್ತು ಗಂಬೂಸಿಯ ಮೀನು ಮರಿಗಳನ್ನು ಹಾಕುವ ಮೂಲಕ ಸೊಳ್ಳೆ ಉತ್ಪಾದನೆಯಾಗದಂತೆ ಮಾಡಬೇಕು.
3. ರಾತ್ರಿ ಹೊತ್ತು ಮಲಗುವಾಗ ಕಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಬೇಕು:
4. ಮಲೇರಿಯಾ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮತ್ತು ಸಹಕಾರ ಅತೀ ಅವಶ್ಯಕ. ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳು ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜಿನಿಕ ಸ್ಥಳಗಳ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು