ನೀವು ಮೊಸರು ಪ್ರಿಯರಿರಾಗಿದ್ದರೆ ಈ ಒಳ್ಳೆಯ ವಿಷಯಗಳು..!

ಬೇಸಿಗೆಯ ಬಿಸಿಯಲ್ಲಿ ಬೇಯುತ್ತಿದ್ದೇವೆ. ಪರಿಸರದ ತಾಪಮಾನ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ದೇಹ ತಂಪಾಗಿರಿಸುವುದು ತುಂಬಾನೇ ಮುಖ್ಯ.
ನಿಯಮಿತವಾಗಿ ಮೊಸರನ್ನು ಆಹಾರದೊಂದಿಗೆ ಅಥವಾ ನೇರವಾಗಿ ಸೇವಿಸುವುದರಿಂದ ದೇಹ ತಂಪಾಗಿರುವುದಲ್ಲದೆ ಆರೋಗ್ಯವಂತಾಗಿರಲು ಸಹಕಾರಿಯಾಗಿದೆ.ಮೊಸರು ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಹಾಗಾಗಿ ಬೇಸಗೆ ಸಮಯದಲ್ಲಿ ನಿತ್ಯ ಮೊಸರು ಸೇವಿಸುವುದನ್ನು ಮರೆಯದಿರಿ.
ಮೊಸರು ಸೇವನೆಯಿಂದ ಮೂಳೆ ಹಾಗೂ ಹಲ್ಲುಗಳು ಬಲಿಷ್ಠವಾಗಿ ಆರೋಗ್ಯಯುತವಾಗಿರುತ್ತದೆ. ಮೊಸರು ಸೇವಿಸಿದರೆ ತೂಕ ಕಡಿಮೆಯಾಗುವುದರ ಜೊತೆಗೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನೂ ನಿವಾರಿಸಲು ಸಹಕಾರಿ ಎಂಬುದು ಸಾಬೀತಾಗಿದೆ. ಮೊಸರನ್ನು ಫ್ರೀಜರ್‌ನಲ್ಲಿಟ್ಟು ಸೇವಿಸಬೇಡಿ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಮೊಸರು ಎಲ್ಲಾ ರೀತಿಯ ಹೊಟ್ಟೆಯ ಸಮಸ್ಯೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ. ಗ್ಯಾಸ್ಟ್ರಿಕ್, ಅಜೀರ್ಣ, ಮಲಬದ್ಧತೆ, ಹೊಟ್ಟೆಯ ಕಿರಿಕಿರಿ ಇದ್ದರೆ, ಮೊಸರು ಸೇವಿಸಿ ಅಥವಾ ಲಸ್ಸಿ, ಮಜ್ಜಿಗೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಯಿಂದ ದೂರವಿರಬಹುದು.
ಮೊಸರು ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ರಕ್ತದ ನಷ್ಟ ಮತ್ತು ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಮೊಸರು ಸಹಾಯಕ.
ಬೇಸಿಗೆ ಕಾಲದಲ್ಲಿ ತಂಪು ಪಾನೀಯವನ್ನು ಕುಡಿಯುವ ಬದಲು ಮೊಸರಿನಿಂದ ತಯಾರಿಸಲಾದ ಲಸ್ಸಿ ಕುಡಿದರೆ ಹೊಟ್ಟೆಯನ್ನು ತಂಪಾಗಿಡಬಹುದು. ಕಡೆದ ಮಜ್ಜಿಗೆ ಕೂಡ ದೇಹವನ್ನು ಒಳಗಿನಿಂದ ತಂಪಾಗಿರಿಸುತ್ತದೆ