ಕಣ್ಣಲ್ಲಿ ನೀರು ತರಿಸಿದರು ಆರೋಗ್ಯಕ್ಕೆ ಒಳ್ಳೆಯದು ಈರುಳ್ಳಿ..!

ಕ್ಯಾನ್ಸರ್ ನಿಯಂತ್ರಿಸುವ ಶಕ್ತಿ ಕೆಲವೊಂದು ಕಿಣ್ವಗಳಿಗೆ ಶಕ್ತಿಯನ್ನು ನೀಡುವಂತಹ ಅಂಶಗಳು ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇದೆ. ಇದು ಕ್ಯಾನ್ಸರ್ ಅಂಶಗಳನ್ನು ದುರ್ಬಲಗೊಳಿಸುತ್ತದೆ, ಅಲ್ಲದೆ ಕ್ಯಾನ್ಸರ್ ಅಂಶಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಇವು ನೆರವಾಗುವುದು. ಕ್ಯಾನ್ಸರ್ ಕೋಶಗಳು ಬೆಳೆಯುವ ಪ್ರಕ್ರಿಯೆಯನ್ನು ಇವು ನಿಧಾನಗೊಳಿಸುವುದು
ಈರುಳ್ಳಿಯು ಕರುಳಿನ ಕ್ಯಾನ್ಸರ್ ಅನ್ನು ಶೇ.56ರಷ್ಟು, ಸ್ತನ ಕ್ಯಾನ್ಸರ್ ನ್ನು ಶೇ.25ರಷ್ಟು ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯು ಜನನಾಂಗ ಗ್ರಂಥಿ ಮತ್ತು ಸ್ತನ ಕ್ಯಾನ್ಸರ್ ಹೊರತುಪಡಿಸಿ ಇತರ ಹಲವಾರು ರೀತಿಯ ಕ್ಯಾನ್ಸರ್ ಅನ್ನು ತಡೆಯುವಲ್ಲಿ ಸಮರ್ಥವಾಗಿದೆ.
ಹಲವಾರು ವಿಧದ ಕ್ಯಾನ್ಸರ್‌ಗೆ ರಾಮಬಾಣ : ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿರುವ ಅಂಶಗಳು ಕರುಳಿನ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಕಿಡ್ನಿಯ ಕ್ಯಾನ್ಸರ್, ಜನನಾಂಗ ಗ್ರಂಥಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಯಕೃತ್ ಕ್ಯಾನ್ಸರ್ ಅನ್ನು ತಡೆಯುತ್ತದೆ.
ಈರುಳ್ಳಿಯನ್ನು ಹಸಿಯಾಗಿ ತಿಂದರೆ ಒಳ್ಳೆಯದು:
ಈರುಳ್ಳಿಯ ಲಾಭಗಳನ್ನು ಪಡೆಯಬೇಕಾದರೆ ಅದನ್ನು ಯಾವ ರೀತಿಯಿಂದ ತಿನ್ನಬೇಕು? ಈರುಳ್ಳಿಯನ್ನು ಕತ್ತರಿಸಿಕೊಂಡು ಹಸಿಯಾಗಿಯೇ ತಿಂದರೆ ತುಂಬಾ ಒಳ್ಳೆಯದು. ಈರುಳ್ಳಿಯನ್ನು ಕತ್ತರಿಸಿಕೊಂಡ 15 ನಿಮಿಷದ ಒಳಗಾಗಿ ತಿಂದರೆ ಅದರಲ್ಲಿರುವ ಕ್ಯಾನ್ಸರ್ ವಿರೋಧಿ ಗುಣಗಳು ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ
ಈರುಳ್ಳಿ ಬೇಯಿಸಿದ ನೀರು: ಈರುಳ್ಳಿಯನ್ನು ಬೇಯಿಸುವ ಯೋಚನೆಯಿದ್ದರೆ ಅದರ ನೀರನ್ನು ಬಿಸಾಡಬೇಡಿ. ಯಾಕೆಂದರೆ ಈರುಳ್ಳಿಯಲ್ಲಿರುವ ಕೆಲವೊಂದು ಅಂಶಗಳು ನೀರಿನಲ್ಲಿ ಬೆರೆತಿರುತ್ತದೆ.