ಈ ಹಣ್ಣನ್ನು ಜೊತೆಯಾಗಿ ಸೇವಿಸಬೇಡಿ..!

ಈ ಹಣ್ಣನ್ನು ನೀವು ಜೊತೆಯಾಗಿ ಸೇವಿಸಿದ್ದೇ ಆದ್ರೆ ನಿಮ್ಮ ಆರೋಗ್ಯ ಏರುಪೇರಾಗುವುದರಲ್ಲಿ ಸಂದೇಹವೇ ಇಲ್ಲ!. ನೈಸರ್ಗಿಕವಾಗಿ ಯತೇಚ್ಛವಾಗಿ ಲಭ್ಯವಾಗುವ ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವು ಮಂದಿಗೆ ಹಲಸು ಎಂದರೆ ಪಂಚಪ್ರಾಣ. ಹಲಸಿನ ಹಣ್ಣು ಸೇವಿಸಿದ ಬಳಿಕ ಕೆಲವೊಂದು ಹಣ್ಣುಗಳನ್ನು ತಿನ್ನಲೇಬಾರದು. ಒಂದೊಮ್ಮೆ ತಿಂದರೆ ಅನಾರೋಗ್ಯ ಗ್ಯಾರಂಟಿ. ಹಾಗಾದ್ರೆ ಆ ಹಣ್ಣುಗಳು ಯಾವುವು ಗೊತ್ತೇ…? ಈ ಸ್ಟೋರಿಯನ್ನು ಕಂಪ್ಲೀಟ್ ಓದಿ.
ಪಪ್ಪಾಯಿ ಇನ್ನೊಂದು ಅದ್ಭುತ ರುಚಿಯ ಹಣ್ಣು. ಹಲಸು ತಿಂದ ನಂತರ ಪಪ್ಪಾಯಿ ಸೇವಿಸಲೇಬಾರದು. ಸೇವಿಸಿದ್ದೇ ಆದರೆ ಚರ್ಮದ ಅಲರ್ಜಿಗೆ ಕಾರಣವಾಗುವುದುರಲ್ಲಿ ಸಂದೇಹವೇ ಇಲ್ಲ.
ಕೆಲವೊಬ್ಬರಲ್ಲಿ ಲೂಸ್ ಮೋಷನ್ ಸಮಸ್ಯೆಯೂ ಎದುರಾಗುತ್ತದೆ. ಹಲಸು ಸೇವಿಸಿದ ತಕ್ಷಣ ಹಾಲು ಸೇವನೆಯೂ ನಿಶಿದ್ಧ. ಹಾಲು ಸೇವಿಸಿದರೆ ಉದರ ಸಮಸ್ಯೆ, ಚರ್ಮದ ಸಮಸ್ಯೆಗಳು ತಲೆದೋರುತ್ತವೆ.
ಬೆಂಡೆಕಾಯಿ ಸೇವನೆ ಮಾಡಿದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹಲಸು ತಿಂದಾದ ಕೂಡಲೆ ಬೆಂಡೆಕಾಯಿ ಸೇವಿಸಿದರೆ ಅಸಿಡಿಟಿ, ಕಾಲುನೋವುಗಳು ಕಂಡು ಬರುತ್ತವೆ.