ನಾವು ಭವಿಷ್ಯದಲ್ಲಿ ಸಕ್ಕರೆ ಕಾಯಿಲೆ ಬಾರದಂತೆ ಹೇಗೆ?ನೋಡಿಕೊಳ್ಳಬಹುದು

ಭವಿಷ್ಯದಲ್ಲಿ ಸಕ್ಕರೆ ಕಾಯಿಲೆ ಬಾರದಂತೆ ತಡೆಗಟ್ಟುವುದು
1.ಬೆಳಗ್ಗೆ 10ಗಂಟೆಗೆ ಪ್ರಥಮ ಭೋಜನ ಮುಗಿಸಬೇಕು. ಬಿಸಿಲೇರಿದಂತೆ ನಮ್ಮಲ್ಲಿ ಜಠರಾಗ್ನಿಯು ಕೂಡಾ ಜ್ವಲಿಸುತ್ತದೆ. ಆ ಸಮಯದಲ್ಲೇ ಭೋಜನ ಮಾಡಬೇಕು.ದ್ವಿತೀಯಾ ಭೋಜನ ರಾತ್ರಿ 8ಗಂಟೆಗೆ ಪೂರ್ತಿಯಾಗಿರಬೇಕು. ಮದ್ಯಾಹ್ನ ಹಣ್ಣುಗಳು /ಉಪಹಾರ ಸೇವಿಸಬಹುದು…..
2. ರಾತ್ರಿ ನೀರು ತುಂಬಿದ ತಾಮ್ರದ ಚೆಮ್ಬಿನಲ್ಲಿ 5 ತುಳಸಿ ದಳಗಳು, ಚೇಪೆ ಎಲೆಗಳು ಹಾಕಿ ಮುಂಜಾನೆ ಈ ನೀರನ್ನು ಸೇವಿಸಬೇಕು ತುಳಸಿ ದಳಗಳ ಸಮೇತ.ಚೇಪೆ ಎಲೆ ತೆಗೆದುಹಾಕಬಹುದು
3. ರಾತ್ರಿ ಮಲಗುವ ಮುಂಚೆ ತ್ರಿಫಲಾ ಚೂರ್ಣವು ಬಿಸಿನೀರು /ಮಜ್ಜಿಗೆ ಸೇರಿಸಿ ಸೇವಿಸಬೇಕು.
4.ನೆಲದಮೇಲೆ ಚಾಪೆ /ಮಣೆ ಮೇಲೆ ಕೂತ್ಕೊಂಡು ಊಟ ಪ್ರಶಾಂತವಾಗಿ, ಮೌನವಾಗಿ ಒಂದೊಂದು ತುತ್ತು ಅಗಿದು ತಿನ್ನಬೇಕು.
ಹೊಂಗೆ ಕಡ್ಡಿ ಅಥವಾ ಬೇವಿನಕಡ್ಡಿ ಯಿಂದ ಹಲ್ಲುಗಳು ತಿಕ್ಕಬೇಕು ;
ಬೇವಿನ /ಹೊಂಗೆ ಕಡ್ಡಿಗಳ ತುದಿಯನ್ನು ನೀರಿನಲ್ಲಿ ನೆನೆಸಿ ಬಳಿಕ ಸ್ವಲ್ಪ ಕುಟ್ಟಿ ಬ್ರಷ್ ನಂತೆ ಮಾಡಿ ಹಲ್ಲುಗಳನ್ನು ಹುಜ್ಜಬೇಕು.
ಮೂಗಿನಲ್ಲಿ,ಹೊಕ್ಕಳ್ಳಲ್ಲಿ,ಕಿವಿಗಳಲ್ಲಿ 2–3 ಹನಿಗಳು ಎಳ್ಳೆಣ್ಣೆ /ಹರಳೆ ಎಣ್ಣೆ ಹಾಕಬೇಕು. ಇದರಿಂದ ಎಂದಿಗೂ ಕಿವುಡು, ಶಿರಸ್ಸಿನ ಕಾಯಿಲೆಗಳು ಬರುವುದಿಲ್ಲ.
ಸ್ವಲ್ಪ ಎಣ್ಣೆ ಬಾಯಲ್ಲಿ ಹಾಕಿ ಚೆನ್ನಾಗಿ ಮುಕ್ಕಳಿಸಿ ಉಗುಳಬೇಕು..ಹೀಗೆ ಮಾಡುವುದರಿಂದ ವಾಯು,ರಕ್ತ ಪರಿಚಲನೆಯಾಗಿ ಧಾತುಗಳು ಪುಷ್ಟಿಯಾಗಿರುವವು..ನೇತ್ರ, ಕಂಠದ ಕಾಯಿಲೆ ಬರಲಾರವು ಹೊಸ ಅಕ್ಕಿ /ಪಾಲಿಶ್ ಇರುವ ಅಕ್ಕಿ ಎಂದರೆ ಬೆಳ್ಳಗಿನ ಅಕ್ಕಿ ತಿನ್ನುವುದರಿಂದ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇದೆ. ಅಕ್ಕಿ ಒಂದು ವರ್ಷದ ಹಿಂದಿನದು, ಸ್ವಲ್ಪ ಹೊಟ್ಟು ಇರುವ ಅಕ್ಕಿಯನ್ನೇ ಬಳಿಸಬೇಕು.ಸೈನ್ಧವ ಉಪ್ಪು ( ಸ್ವಲ್ಪ ಕೆಂಪಗೆ ಇರುವುದು ) ಕರಿ ಮೆಣಸು. ಹಸು ಹಾಲು, ತುಪ್ಪ, ಮಜ್ಜಿಗೆ ಸೇವಿಸಬೇಕು.
ನವಣೆ ಅನ್ನ, ನವಣೆ ಇಡ್ಲಿ., ಉಪ್ಪಿಟ್ಟು ಹೆಚ್ಚಾಗಿ ಉಪಯೋಗಿಸಬೇಕು.2–3 ತಿಂಗಳಿಗೊಂದು ಸಲ ಹರಳೆಣ್ಣೆ ಶುಂಠಿರಸ, ಜೇನುತುಪ್ಪ ಸೇರಿಸಿ ಸೇವಿಸಿದರೆ (3–5 ಚಮಚ ಖಾಲಿ ಹೊಟ್ಟೆಯಲ್ಲಿ )ಉದರದಲ್ಲಿರುವ ಮಾಲಿನ್ಯವು ಹೊರಹಾಕುವುದು…ಇದರಿಂದ ಜೀರ್ಣಕಾರಿ ಕಿಣ್ವಗಳು ಹೆಚ್ಚಾಗಿ ಜೀರ್ಣಶಕ್ತಿ ಹೆಚ್ಚುವುದು..
ಫ್ರಿಡ್ಜ್ ನಲ್ಲಿ ಇಟ್ಟಿರುವ ತಿಂಡಿ ತಿನುಸುಗಳು, ರಾಸಾಯಿನಿಕ ದ್ರವ್ಯಗಳು ಬೆರೆಸಿರುವ ಬೆಲ್ಲ, ಬಳಸಬಾರದು.ಆರ್ಗಾನಿಕ್ ಬೆಲ್ಲ/ತಾರೆಬೆಲ್ಲ ಬಳಿಸಬೇಕು..ಹೀಗೆ ಮಾಡುವುದರಿಂದ ಸಕ್ಕರೆ ಕಾಯಿಲೆಯೇ ಅಲ್ಲ, ಇನ್ನ್ಯಾವ ಕಾಯಿಲೆಯು ಪೀಡಿಸಲಾರದು.