ಯೋಗದಿಂದ ಅರೋಗ್ಯಉತ್ತಮ ಪಡಿಸಿಕೊಳ್ಳಬಹುದು

ಯೋಗ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಯೋಗದಿಂದ ಸ್ನಾಯುಸೆಳೆತ, ಕೀಲು ನೋವು ಪರಿಹಾರ ವಾಗಲಿದ್ದು ಸದೃಢ ಸ್ನಾಯುಗಳನ್ನು ಹೊಂದಬಹುದಾಗಿದೆ.

ಉಸಿರಾಟದ ಸಮಸ್ಯೆ ತಡೆಯಬಹುದು. ಯೋಗಾಸನ ಮಾಡುವಾಗ ಶ್ವಾಸ ಬಹಳ ಮುಖ್ಯವಾಗುತ್ತದೆ. ಪ್ರಾಣಾಯಾಮ, ಅನುಲೋಮ, ವಿಲೋಮಗಳನ್ನು ಸಹಜವಾಗಿಯೇ ಮಾಡುವುದರಿಂದ ಉತ್ತಮ ಶ್ವಾಸವನ್ನೂ ಹೊಂದಬಹುದಾಗಿದೆ. ದೈಹಿಕವಾಗಿ ಸಕ್ರಿಯವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಹಾಗೂ ಖಿನ್ನತೆಯ ಲಕ್ಷಣಗಳಿಗೂ ಪರಿಹಾರವಾಗಬಲ್ಲದು.

ಪ್ರತಿನಿತ್ಯ ಮುಂಜಾನೆ ಅಥವಾ ಸಂಜೆ ವೇಳೆ ಯೋಗವನ್ನು ಮಾಡೋದ್ರಿಂದ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು. ಅಷ್ಟೆ ಅಲ್ಲ ಕರೋನಾದಂತಹ ಸಂಧರ್ಭದಲ್ಲಿ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು. ಹೀಗಾಗಿ ಮುಂಜಾನೆ ಎದ್ದಾಕ್ಷಣ ಯೋಗ, ಬಳಿಕ ಉತ್ತಮ ಆಹಾರ , ಫ್ರೋಟ್ಸ್,ನಟ್ಸ್,ಓಟ್ಸ್,ಜ್ಯೂಸ್ , ಹಸಿರು ತರಕಾರಿಗಳನ್ನು ಯಥೇಚ್ಚವಾಗಿ ಬಳಸಿದ್ರೆ ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬಹುದು.

ವೈದ್ಯರ ಸಲಹೆ ಪ್ರಕಾರ ಕರೋನಾದಂತಹ ಟೈಮ್ ನಲ್ಲಿ ಫಿಟ್ ನೆಸ್ ಗೆ ಯೋಗ, ಒಳ್ಳೆ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಅಷ್ಟೆಅಲ್ಲ ಯಥೇಚ್ಚವಾಗಿ ನೀರನ್ನು ಕೂಡಿಬೇಕು. ಇವೆಲ್ಲದರ ಜೊತೆಗೆ ಯೋಗ. ಹೀಗೆ ಮಾಡೊದ್ರಿಂದ ಶರೀರವನ್ನು ಸಧೃಢವಾಗಿಡೋದ್ರ ಜೊತೆಗೆ ಕರೋನಾದಂತಹ ಸಾಂಕ್ರಾಮಿಕ ರೋಗದಿಂದ ನಮ್ಮನ್ನು ದೂರ ಇಡಬಹುದು. ಆದ್ರೆ ಎಣ್ಣೆ ಪದಾರ್ಥಗಳಿಂದ ದೂರ ಇದ್ದಷ್ಟು ಆರೋಗ್ಯದ ರಕ್ಷಣೆ ಮಾಡಬಹುದು ಅನ್ನುತ್ತಾರೆ ವೈದ್ಯರು.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group