“ಪೈನಾಪಲ್” ನ ಅರೋಗ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳಿ…

ಪೈನಾಪಲ್ ತುಂಬಾ ಆರೋಗ್ಯಕರವಾದ ಹಣ್ಣಾಗಿದೆ. ಈ ಹಣ್ಣಿಗೆ ಅನಾನಸ್, ಕೊಮೊಸಸ್ ಎಂತಲೂ ಕರೆಯುತ್ತಾರೆ. ದಕ್ಷಿಣ ಅಮೆರಿಕಾದಲ್ಲಿ ಹುಟ್ಟಿಕೊಂಡ ಈ ಹಣ್ಣು ಅನೇಕ ಪೋಷಕಾಂಶಗಳನ್ನು ಮತ್ತು ರೋಗನಿರೋಧಕಗಳಿಂದ ಸಮೃದ್ಧವಾಗಿದೆ.ಇದರ ಜೊತೆಗೆ ಈ ಹಣ್ಣು ನಿಮ್ಮ ಕೂದಲು, ಚರ್ಮ ಮತ್ತು ಮೂಳೆಗಳಿಗೆ ಬಲ ನೀಡುವ ಹಣ್ಣಾಗಿದೆ. ಇದು ವಿಟಮಿನ್ ಎ, ವಿಟಮಿನ್ ಕೆ, ಕ್ಯಾಲ್ಸಿಯಂ, ರಂಜಕ ಮತ್ತು ಹಲವು ಸತುಗಳನ್ನು ಒಳಗೊಂಡಿದೆ.
ಫೈನಾಪಲ್‍ನ ಆರೋಗ್ಯದ ಪ್ರಯೋಜನಗಳು
1 ಶೀತ ಮತ್ತು ಕೆಮ್ಮು ನಿವಾರಣೆ : ನೀವು ವಿಪರೀತ ಶೀತದಿಂದ ಬಳಲುತ್ತಿದ್ದರೆ ಅನಾನಸ್ ಸೇವಿಸಬಹುದು. ಏಕೆಂದರೆ ಈ ಹಣ್ಣನಲ್ಲಿ ಬ್ರೋಮಲೇನ್1 ಎಂಬ ಅಂಶವಿದ್ದು ಇದು ಸೊಂಕು ತರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ನೆಗಡಿ ಮತ್ತು ಕೆಮ್ಮಿನಿಂದ ರಕ್ಷಿಸುತ್ತದೆ. ಆದರೆ ಇದನ್ನು ನಿಯಮಿತವಾಗಿ ಸೇವಿಸಬೇಕು
2 ಮೂಳೆಗಳನ್ನು ಬಲಪಡಿಸುತ್ತದೆ: ಅನಾನಸ್ ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಇದು ನಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯಮಾಡುತ್ತದೆ.
3 ಹಲ್ಲುಗಳಿಗೆ ಶಕ್ತಿ ನೀಡುತ್ತದೆ: ಅನಾನಸ್ ಸೇವಿಸುವುದರಿಂದ ನಮ್ಮ ಹಲ್ಲು ಮತ್ತು ಒಸಡುಗಳು ಗಟ್ಟಿಯಾಗುತ್ತವೆ. ನಮ್ಮ ಹಲ್ಲು ಮತ್ತು ಮೂಳೆಗಳು ಕ್ಯಾಲ್ಸಿಯಂನಿಂದ ರೂಪಗೊಂಡಿದೆ. ಅನಾನಸ್‍ನಲ್ಲಿರುವ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಹಲ್ಲಿನ ಆರೋಗ್ಯವನ್ನು ಕಾಪಾಡುತ್ತದೆ.
4 ಕ್ಯಾನ್ಸರ್ ತಡೆಯುತ್ತದೆ: ಫೈನಾಪಲ್ ಸೇವನೆಯಿಂದ ಕ್ಯಾನ್ಸರ್ ಕಾಯಿಲೆಯನ್ನು ದೂರತಳ್ಳಬಹುದು. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‍ಗಳು ಕ್ಯಾನ್ಸರ್ ತರುವ ಕೆಟ್ಟ ರಾಸಾಯನಿಕಗಳ ವಿರುದ್ಧ ಹೋರಾಡುತ್ತದೆ. ಮತ್ತು ನಮ್ಮ ಕೋಶಗಗಳಿಗೆ(cells)ಯಾವುದೇ ಹಾನಿಯಾಗದಂತೆ ತಡೆಯುತ್ತದೆ.
5 ಸಂಧಿವಾತ ನಿವಾರಿಸುತ್ತದೆ: ಸಂಧಿವಾತವು ಕೀಲುಗಳಲ್ಲಿ ತೀವ್ರವಾದ ನೋವುನ್ನು ಒಳಗೊಂಡಿರುತ್ತದೆ. ಅನಾನಸ್‍ನಲ್ಲಿ ಬ್ರೋಮಲೆನ್ ಅಂಶವಿದ್ದು ಉರಿಯೂತ ನಿವಾರಿಸುವ ಗುಣವನ್ನು ಹೊಂದಿದೆ.
6 ಜೀರ್ಣಕ್ರಿಯೆಗೆ ಸಹಕಾರಿ: ಅಜೀರ್ಣದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆ ಉಬ್ಬರ, ಹೊಟ್ಟೆ ಉರಿ ಮುಂತಾದ ಸಮಸ್ಯೆಗಳನ್ನು ಅನಾನಸ್ ಕಡಿಮೆ ಮಾಡುತ್ತದೆ.
7 ಕಣ್ಣಿನ ಆರೈಕೆ : ನಮಗೆ ವಯಸ್ಸಾದಂತೆ ಕಣ್ಣಿನ ಮೇಲೆ ಪರಿಣಾಮ ಬೀರುವ ರೋಗಗಳನ್ನು ಅನಾನಸ್ ಸೇವಿಸುವುದರಿಂದ ತಡೆಗಟ್ಟಬಹುದು. ಇದರಲ್ಲಿನ ವಿಟಮಿನ ಎ ಮತ್ತು ಸಿ ಸತ್ವ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ದೃಷ್ಠಿಯನ್ನು ಹೆಚ್ಚಿಸುತ್ತದೆ.