ಪುದೀನಾ ಹೊಂದಿರುವ ಆಯುರ್ವೇದ ಗುಣಗಳನ್ನು ತಿಳಿಯಿರಿ.. !

ಯಾವುದೇ ರೂಪದಲ್ಲಿ ಬಳಸಿದರೂ ಪುದೀನಾವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆರೋಗ್ಯ ಗುಣಗಳನ್ನು ಹೊರತುಪಡಿಸಿ ಪುದೀನಾ ಎಲೆಗಳು ಸೊಳ್ಳೆ ಮತ್ತು ಕೀಟಗಳನ್ನು ಓಡಿಸುವಲ್ಲಿ ಪರಿಣಾಮಕಾರಿ. ಪುದೀನಾ ಎಲೆಗಳಿಂದ ಆಗುವಂತಹ ಲಾಭಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಇದನ್ನು ಓದಿಕೊಂಡು ಪುದೀನಾ ನಿಮ್ಮ ಆಹಾರ ಕ್ರಮದಲ್ಲಿ ಬಳಸಿ….
ಪ್ರತಿರೋಧಕ ಶಕ್ತಿ ಹೆಚ್ಚಿಸುವುದು : ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಪುದೀನಾ ಎಲೆಗಳು ಪ್ರತಿರೊಧಕ ಶಕ್ತಿ ಹೆಚ್ಚಿಸುವುದು. ನೀವು ಸೇವಿಸುವ ಆಹಾರದಲ್ಲಿ ಪುದೀನಾದ ಕೆಲವು ಎಲೆಗಳನ್ನು ಹಾಕಿದರೆ ಒಳ್ಳೆಯ ಫಲಿತಾಂಶ ಸಿಗುವುದು.
ಅಜೀರ್ಣ ನಿವಾರಣೆ : ನೀವು ಅಜೀರ್ಣದಿಂದ ಬಳಲುತ್ತಾ ಇದ್ದರೆ ಪುದೀನಾ ಎಲೆಗಳು ನಿಮ್ಮ ನೆರವಿಗೆ ಬರಲಿದೆ. ಪುದೀನಾ ಎಲೆಗಳು ಜೊಲ್ಲುರಸದ ಗ್ರಂಥಿಗಳನ್ನು ಕ್ರಿಯಾತ್ಮಕಗೊಳಿಸುವುದು ಮತ್ತು ಕಿಣ್ವಗಳನ್ನು ಪ್ರೇರೇಪಿಸುವ ಮೂಲಕ ಜೀರ್ಣಕ್ರಿಯೆಗೆ ಶಕ್ತಿ ನೀಡುವುದು. ಕೆಲವು ತಾಜಾ ಪುದೀನಾ ಎಲೆಗಳನ್ನು ತೆಗೆದುಕೊಂಡು ಅದನ್ನು ಒಂದು ಲೋಟ ನೀರಿಗೆ ಹಾಕಿ ಮತ್ತು ಐದು ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರನ್ನು ಕುಡಿಯಿರಿ. ನಿಮ್ಮ ಸಮಸ್ಯೆ ನಿವಾರಣೆಯಾಗುವ ತನಕ ನಿಯಮಿತವಾಗಿ ಹೀಗೆ ಮಾಡಿ.
ತಲೆನೋವು ಮತ್ತು ವಾಕರಿಕೆ ನಿವಾರಣೆ: ಪುದೀನಾ ಎಲೆಗಳಲ್ಲಿ ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಇವೆ. ಪುದೀನಾ ಎಣ್ಣೆ ತೆಗೆದುಕೊಂಡು ಅದನ್ನು ಹಣೆಗೆ ಹಚ್ಚಿಕೊಳ್ಳಿ ಇದರಿಂದ ತಲೆನೋವು ಮತ್ತು ವಾಕರಿಕೆ ನಿವಾರಣೆಯಾಗುವುದು.
ಇತರೆ ಪ್ರಯೋಜನಗಳು /
1.ಶ್ವಾಸಕೋಶದ ರೋಗ ತಡೆಯುವುದು
4.ವಾಂತಿ ಮತ್ತು ವಾಕರಿಕೆಯನ್ನು ನಿವಾರಿಸುತ್ತದೆ
5.ಮೂಗು ಕಟ್ಟಿರುವುದನ್ನು ತೆರವುಗೊಳಿಸುತ್ತದೆ
6.ಗರ್ಭಿಣಿ ಸ್ತ್ರೀಯರಿಗೆ ಒಳ್ಳೆಯದು
7.ತೂಕ ಕಳೆದುಕೊಳ್ಳಲು
8.ಜ್ವರವನ್ನು ಕಡಿಮೆಗೊಳಿಸುತ್ತದೆ