ಬೇಸಿಗೆಯಲ್ಲಿ ನೀರು ಆಹಾರವನ್ನಿಟ್ಟು ಪ್ರಾಣಿ_ಪಕ್ಷಿಗಳ ರಕ್ಷಿಸೋಣ…

ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ಅಷ್ಟೊಂದಾಗಿ ಆಹಾರದ ಕೊರತೆಯಾಗದಿದ್ದರೂ, ಪಟ್ಟಣ ಪ್ರದೇಶಗಳ ಮರ, ಕಟ್ಟಡಗಳಲ್ಲಿ ವಾಸವಿರುವ ಪಾರಿವಾಳ, ಗುಬ್ಬಚ್ಚಿ, ಕಾಗೆ, ಗಿಡುಗ, ಅಳಿಲು ಮೊದಲಾದವುಗಳು ನೀರು ಆಹಾರಕ್ಕಾಗಿ ಹಾತೊರೆಯುವ ಸ್ಥಿತಿ ಇದ್ದೇ ಇದೆ.
ಅದರಲ್ಲೂ ರಸ್ತೆ ಬದಿಯ ಗಿಡ-ಮರಗಳಲ್ಲಿ ಆಶ್ರಯ ಪಡೆದಿರುವ ಸಣ್ಣಪುಟ್ಟ ಪ್ರಾಣಿ ಮತ್ತು ಪಕ್ಷಿಗಳು ಕುಡಿಯುವ ನೀರನ್ನು ಹುಡುಕಿಕೊಂಡು ಓಡಾಡುತ್ತಿವೆ. ಕೆಲವೊಮ್ಮೆ ಇಂತಹ ಸಂದರ್ಭಗಳಲ್ಲಿ ವಾಹನಗಳಿಗೆ ಚಕ್ರಕ್ಕೆ ಸಿಲುಕಿ ಸಾಯುವುದು ಅಲ್ಲಲ್ಲಿ ಕಂಡು ಬರುತ್ತದೆ.
ನೀರು ತುಂಬಿ ಮರದ ಕೊಂಬೆಗಳಿಗೆ ಕಟ್ಟುವುದು: ರಸ್ತೆ ಬದಿ ಬಿಸಾಡಿದ ಪ್ಲಾಸ್ಟಿಕ್ ನೀರು ಬಾಟಲಿಗಳನ್ನು ಸಂಗ್ರಹಿಸಿ ಅದಕ್ಕೆ ನೀರು ತುಂಬಿ ಮರದ ಕೊಂಬೆಗಳಿಗೆ ಕಟ್ಟುವ ಮೂಲಕ ಪಕ್ಷಿಗಳಿಗೆ ಜೀವಜಲ ನೀಡುವ ಕಾಯಕ ಮಾಡೋಣ.
ಎಲ್ಲರೂ ತಮ್ಮ ಸುತ್ತಮುತ್ತ ಇರುವ ಮರಗಳಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳಿಗೆ ಒಂದಷ್ಟು ನೀರು ಮತ್ತು ಆಹಾರವನ್ನಿಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಬೇಸಿಗೆಯಲ್ಲಿ ಸಣ್ಣ ಪುಟ್ಟ ಪ್ರಾಣಿ-ಪಕ್ಷಿಗಳ ಜೀವ ಉಳಿಸಿ ಅವುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಬಹುದೇನೋ?