ದಿನವಿಡೀ ಲ್ಯಾಪ್ಟಾಪ್ ಬಳಸುವ ಬಳಕೆದಾರರೇ ನಿಮ್ಮ ಕಣ್ಣಿನ ಕುರಿತು ಜಾಗೃತಿ..

ನಿಮ್ಮ ಕಣ್ಣನು ಸುರಕ್ಷಿತವಾಗಿ ಇರಿಸಲು ಹೀಗೆ ಮಾಡಿ;
ಲ್ಯಾಪ್ ಟಾಪ್ / ಕಂಪ್ಯೂಟರನ್ನು ಸರಿಯಾದ ಅಂತರದಲ್ಲಿ ಇರಿಸುವುದು. ಅನೇಕ ಜನರು ತಮ್ಮ ಡಿಜಿಟಲ್ ಸಾಧನಗಳನ್ನು ತಮ್ಮ ಕಣ್ಣುಗಳ ಹತ್ತಿರ ಹಿಡಿದುಕೊಂಡು ಬಳಸುತ್ತಾರೆ.ಹಾಗಾಗಿ ಅವರು ಆಗಾಗ್ಗೆ ಕಣ್ಣಿನ ಸಮಸ್ಯೆಗಳನ್ನು ಅಭಿವೃದ್ಧಿ ಪಡಿಸುವ ಹೆಚ್ಚಿನ ಅಪಾಯಗಳನ್ನು ಹೊಂದಿರುತ್ತಾರೆ
ನಿಮ್ಮ ಲ್ಯಾಪ್ಟಾಪ್ ಅನ್ನು ಯಾವಾಗಲೂ ನಿಮ್ಮ ತೋಳಿನ ಅಂತರದಲ್ಲಿ ಇರಿಸಿಕೊಳ್ಳುವುದು ಉತ್ತಮ..ಅಂದರೆ ಪರದೆಗಳು ನಿಮ್ಮ ಕಣ್ಣಿನಿಂದ ಸೂಕ್ತ ದೂರದಲ್ಲಿ ಇರಬೇಕು.
ನಿಮ್ಮ ಲ್ಯಾಪ್ ಟಾಪ್ ಗಳು ಕನಿಷ್ಟ ಒಂದು ತೋಳಿನ ಉದ್ದ (25 ಇಂಚುಗಳು) ದೂರದಲ್ಲಿ ಇರಬೇಕು ಮತ್ತು ನಿಮ್ಮ ಕಣ್ಣಿನ ಮಟ್ಟಕಿಂತ ಸ್ವಲ್ಪ ಕೆಳಗೆ ಇರಬೇಕು.ಇದು ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಬೆಳಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಕೆಲಸದ ನಿಮಿತ್ತತೆಯೋ ಅಥವಾ ಸೋಶಿಯಲ್ ಮೀಡಿಯಾ ಬಳಕೆಗೆ ಸಂಬಂಧಿಸಿದಂತೆ ಹೆಚ್ಚಿನವರು ಮೊಬೈಲ್,ಲ್ಯಾಪ್ಟಾಪ್, ಕಂಪ್ಯೂಟರ್ ಬಳಸುತ್ತಾರೆ. ಕೊರೋನ ಬಳಿಕವಂತೂ ಹೆಚ್ಚಿನವರು ವರ್ಕ್ ಫ್ರಮ್ ಹೋಂ ಉದ್ಯೋಗದಲ್ಲೆ ಇರುವುದರಿಂದ ಇದರಿಂದ ಬೇಸತ್ತು ಹೋಗಿದ್ದಾರೆ.
ಇಡೀ ದಿನವೆಲ್ಲಾ ಲ್ಯಾಪ್ ಟಾಪ್ ಎದುರಲ್ಲೇ ಕೂರುವುದರಿಂದ ಕಣ್ಣಿಗೆ ಅದೆಷ್ಟೋ ಹಾನಿ ಇದೆ.ಕೆಲಸ ಮಾಡದೆ ಇರುವವರು ಸಹ ಟಿವಿ ನೋಡುವ ಅಥವಾ ಸಾಮಾಜಿಕ ಮಾಧ್ಯಮವನ್ನು ಬಳಸುವ ವಯಸ್ಕರು ಮತ್ತು ಮಕ್ಕಳ ಪರಿಸ್ಥಿತಿಯು ಒಂದೇ ಆಗಿದೆ.
ಡಿಜಿಟಲ್ ಪರದೆಯ ಸಮಯದ ಹೆಚ್ಚಳದಿಂದ ಕಣ್ಣುಗಳು ಸಾಮಾನ್ಯಕ್ಕಿಂತ ಹೆಚ್ಚು ಒತ್ತಡದಲ್ಲಿ ಇರುತ್ತದೆ.ಅದರಿಂದ ಅವುಗಳನ್ನು ಸುರಕ್ಷಿತವಾಗಿ ಇಡಲು ಈ ಮೇಲಿನ ಸಲಹೆಯನ್ನು ಅನುಸರಿಸಿ.