ಆಳವಾದ ಜ್ಞಾನದಲ್ಲಿ ತೊಡಗಲು ಈ ಕಿವಿ ಮಾತುಗಳು…!

ನಿತ್ಯವೂ ಧ್ಯಾನವನ್ನು ಅಭ್ಯಾಸ ಮಾಡುತ್ತಿರಬಹುದು. ಆದರೆ ಧ್ಯಾನಕ್ಕೆ ಕುಳಿತಾಗ ನಿಮ್ಮ ಮನಸ್ಸು ವಿಚಾರಗಳ ಲೋಕಕ್ಕೆ ಪಯಣಿಸುವುದನ್ನು ನೀವು ಗಮನಿಸಿದ್ದೀರಾ? ಹೇಗೆ ಧ್ಯಾನ ಮಾಡಬೇಕು ಎನ್ನುವುದನ್ನು ಕಲಿಯುವುದು ಮೊದಲ ಹೆಜ್ಜೆ. ಆದರೆ ನೀವು ಒಂದೊಂದೇ ಮೆಟ್ಟಿಲುಗಳನ್ನೇರುತ್ತ ಉನ್ನತ ಸ್ತರವನ್ನು ತಲುಪಲು ಬಯಸುತ್ತೀರಾ? ಆಳವಾದ ಅನುಭವವನ್ನು ಹೊಂದಲು ಇರುವ ಹೆಚ್ಚಿನ ಮಾರ್ಗಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ.

#1 ಇನ್ನೊಬ್ಬರ ಮುಖದಲ್ಲಿ ನಗುವನ್ನು ತನ್ನಿ :

ಬೇರೆಯವರಿಗೆ ಸಹಾಯ ಮಾಡಿದಾಗ ನಿಮಗೆ ಹೇಗೆ ಅನ್ನಿಸುತ್ತದೆ? ಸಂತೋಷವಾಗುತ್ತದೆಯೇ? ತೃಪ್ತಿಯಾಗುತ್ತದೆಯೇ? ನಿಮ್ಮೊಳಗೆ ಏನೋ ಒಂದು ವಿಸ್ತಾರವಾಗುತ್ತಿರುವ ಹಾಗೆ ಧನಾತ್ಮಕ ಶಕ್ತಿಯೊಂದು ಸ್ಫೋಟಿಸುವ ಅನುಭವ ನಿಮಗಾಗುತ್ತದೆಯೇ? ಏಕೆ ಹೀಗೆ ಆಗುತ್ತದೆ ಎಂದು ನಿಮಗೆ ಗೊತ್ತಾ? ಏಕೆಂದರೆ, ನೀವು ಇನ್ನೊಬ್ಬರ ಸೇವೆ ಮಾಡಿದಾಗ, ಇನ್ನೊಬ್ಬರ ಮುಖದಲ್ಲಿ ನಗು ತರುವ ಕೆಲಸ ಮಾಡಿದಾಗ ನಿಮ್ಮ ಸುತ್ತಲೂ ಒಂದು ಒಳ್ಳೆಯ ವಾತಾವರಣ ನಿರ್ಮಾಣವಾಗುತ್ತದೆ,

#2 ಮೌನದ ಸದ್ದನ್ನು ಆಲಿಸಿ! :

ಮುಂಜಾವಿನ ಸಮಯ ಬಿಸಿಲು ಮಚ್ಚಿನ ಮೇಲೆ ನಿಂತಿದ್ದೀರಿ, ಭವ್ಯವಾದ ಕೆಂಪು ಆಕಾಶವನ್ನು ನಿರುಕಿಸುತ್ತ ಅರುಣೋದಯದ ಸೌಂದರ್ಯಕ್ಕೆ ಸಂಪೂರ್ಣವಾಗಿ ಮಾರುಹೋಗಿದ್ದೀರಿ ಎಂದು ಊಹಿಸಿಕೊಳ್ಳಿ. ಆಳವಾದ ಒಂದು ಮೌನ, ನಿಶ್ಶಬ್ದತೆ ಹಾಗೂ ಸೌಂದರ್ಯದೊಡನೆ ನೀವು ಒಂದಾಗಿಹೋದ ಅನುಭವ ನಿಮಗಾಗುತ್ತಿದೆಯೇ? ಶಬ್ದಗಳಿಗೂ ಮೀರಿದ ಸೌಂದರ್ಯದ ಅನುಭವಕ್ಕೆ – ನಿಮ್ಮನ್ನು ಕೊಂಡೊಯ್ಯುವ. ನಿಮ್ಮ ಮನಸ್ಸು ಎಷ್ಟು ಶಾಂತವಾಗಿದೆ, ತಿಳಿಯಾಗಿದೆ. ಏಕೆ ಹೀಗೆ ಎಂದು ನಿಮಗೆ ಅನ್ನಿಸಿರಬೇಕಲ್ಲವೇ?ಮೌನದಲ್ಲಿ ವಿಚಾರಗಳ ಪ್ರಮಾಣ ಕಡಿಮೆ ಇದ್ದು ನಿಮ್ಮ ಮನಸ್ಸು ತಿಳಿಯಾಗುತ್ತದೆ.

#3 ಯೋಗ್ಯಾಭಾಸದಿಂದ ನಿಮ್ಮ ಶರೀರಕ್ಕೆ ಮೆರಗು ನೀಡಿ: ಕೆಲವು ದಿನ ಧ್ಯಾನ ಮಾಡುವಾಗ ನಿಮ್ಮ ಮನಸ್ಸು ತುಂಬಾ ಪ್ರಕ್ಷುಬ್ದವಾಗಿರುವುದನ್ನು ಆಳವಾಗಿ ಧ್ಯಾನ ಮಾಡಲು ಸಾಧ್ಯವಾಗದೇ ಇರುವುದನ್ನು ನೀವು ಗಮನಿಸಿರಬಹುದು.ಕಾರಣ, ದೀರ್ಘಕಾಲದ ಕೆಲಸ ನಿಮ್ಮ ದೇಹಕ್ಕೆ ಬಿರುಸುತನವನ್ನು ಉಂಟು ಮಾಡುತ್ತದೆ ಹಾಗೂ ಇದರಿಂದ ಉಂಟಾಗುವ ನೋವು ನಿಮಲ್ಲಿ ಪ್ರಕ್ಷುಬ್ಧತೆಯನ್ನು ತರುತ್ತದೆ. ಯೋಗಾಸನ ಮಾಡುವುದರಿಂದ ಈ ಬಿರುಸುತನ ನಿವಾರಣೆಯಾಗುವುದರ ಜೊತೆಗೆ ಪ್ರಕ್ಷುಬ್ಧತೆಯಿಂದಲೂ ನೀವು ಮುಕ್ತರಾಗುತ್ತೀರಿ

#4 ನೀವು ಸೇವಿಸುವ ಆಹಾರವನ್ನು ಎಚ್ಚರಿಕೆಯಿಂದ ಗಮನಿಸಿ:

ಕರಿದ ಪದಾರ್ಥಗಳನ್ನು, ಮಾಂಸಾಹಾರವನ್ನು ಸೇವಿಸಿದ ನಂತರ ಧ್ಯಾನದಲ್ಲಿ ತೊಡಗಿದ ದಿನಗಳನ್ನು ಹಾಗೂ ಲಘುವಾದ ಆರೋಗ್ಯ ಪೂರ್ಣವಾದ ಆಹಾರವನ್ನು ಸೇವಿಸಿದ ನಂತರ ಧ್ಯಾನದಲ್ಲಿ ತೊಡಗಿದ ದಿನಗಳ ಬಗ್ಗೆ ಯೋಚಿಸಿ. ನಿಮ್ಮ ಧ್ಯಾನದಲ್ಲಿ ಆಗುವ ವ್ಯತ್ಯಾಸ ಕಾಣುತ್ತದೆಯಲ್ಲವೇ? ಇದಕ್ಕೆ ನೀವು ಸೇವಿಸುವ ಆಹಾರ ನಿಮ್ಮ ಮನಸ್ಥಿತಿಯ ಮೇಲೆ ನೇರ ಪ್ರಭಾವವನ್ನು ಬೀರುವುದೇ ಕಾರಣ.

#5 ನಿಮ್ಮಷ್ಟಕ್ಕೇ ಹಾಡಿಕೊಳ್ಳಿ: ಬೇರೆ ಬೇರೆ ರೀತಿಯ ಸಂಗೀತವು ನಿಮ್ಮಲ್ಲಿ ಬೇರೆ ಬೇರೆ ತರಹದ ಭಾವವನ್ನು ಉದ್ದೀಪಿಸುವುದನ್ನು ನೀವು ಗಮನಿಸಿದ್ದೀರಾ?ನಾವು ೯೦% ಅಥವಾ ಹೆಚ್ಚು ಪಾಲು ಆಕಾಶ ತತ್ವದಿಂದ ಮಾಡಲ್ಪಟ್ಟಿದ್ದೇವೆ. ಆದ್ದರಿಂದ ಶಬ್ದವು ನಮ್ಮ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ.

#6 ನಿತ್ಯವೂ ಧ್ಯಾನ ಮಾಡುವ ಸಮಯವನ್ನು ನಿಗದಿಪಡಿಸಿಕೊಳ್ಳಿ: ಶಿಸ್ತನ್ನು ಪಾಲಿಸುವುದು ಹಾಗೂ ಅಭ್ಯಾಸವನ್ನು ಗೌರವಿಸುವುದು ಧ್ಯಾನದಲ್ಲಿ ಆಳಕ್ಕಿಳಿಯಲು ತುಂಬಾ ಮುಖ್ಯ. ಆದ್ದರಿಂದ ಪ್ರತಿ ನಿತ್ಯವೂ ಧ್ಯಾನ ಮಾಡಬೇಕಾದ ಸಮಯವನ್ನು ನಿಗದಿ ಪಡಿಸಿಕೊಳ್ಳಿ ಹಾಗೂ ಆಳವಾದ ಧ್ಯಾನದ ಅದ್ಭುತ ಅನುಭವಕ್ಕೆ ಒಳಗಾಗಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group