ಕೈ ತೋಟ ಮಾಡಲೂ ಕೆಲವು ಸರಳ ಸಲಹೆಗಳು…

» ಕೈತೋಟ ಮಾಡಲು ಕೆಲವು ಸರಳ ಸಲಹೆ ಹಾಗೂ ಬೇಗನೆ ಫಲಿತಾಂಶ ಕೂಡ ನೀಡುವುದು. ಈ ಲೇಖನ ಓದಿದ ತಕ್ಷಣ ನೀವು ಕೂಡ ಕೈದೋಟದಲ್ಲಿ ತೊಡಗಿಕೊಳ್ಳಿ.

1. ಪ್ಲಾಸ್ಟಿಕ್ ಮಡಕೆ :

ಕೈದೋಟ ಸಾವಯವಲ್ಲದೆ ಇರುವಂತಹ ವಸ್ತುಗಳನ್ನು ಸಾವಯವಾಗಿರುವ ಕೈದೋಟಕ್ಕೆ ಬಳಸುವಂತಹ ಅತ್ಯುತ್ತಮ ವಿಧಾನ ಇದಾಗಿದೆ. ಪ್ಲಾಸ್ಟಿಕ್ ಮಡಕೆಯನ್ನು ನೇರವಾಗಿ ಸಸ್ಯದ ಹಾಸಿಗೆ ಮೇಲೆ ನೇರವಾಗಿ ಅಳವಡಿಸಿ. ಇದರಿಂದ ಋತು ಬದಲಾದಾಗ ಇದನ್ನು ತೆಗೆಯಲು ಸುಲಭವಾಗುವುದು.

2. ಕಾರ್ಕ್ (ಮರದ ತೊಗಟೆ) ಬಳಸಿ : ಹೆಚ್ಚಾಗಿ ಕೆಲವೊಂದು ಮನೆಯಲ್ಲಿ ವೈನ್ ಬಳಸಿದ ಬಳಿಕ ಅದರ ಮರದ ಕಾರ್ಕ್ ಹಾಗೆ ಉಳಿದಿರುವುದು. ಇದನ್ನು ತೋಟದಲ್ಲಿ ಹೇಗೆ ಬಳಸಬೇಕೆಂದು ಹೆಚ್ಚಿನವರಿಗೆ ತಿಳಿದಿಲ್ಲ.

3. ಪ್ಲಾಸ್ಟಿಕ್ ಫೋರ್ಕ್(ಚಮಚ) ರಕ್ಷಣೆ: ಕೀಟಗಳಿಂದ ತೋಟವನ್ನು ರಕ್ಷಿಸಲು ಕೆಲವೊಂದು ಪ್ಲಾಸ್ಟಿಕ್ ಚಮಚಗಳನ್ನು ತೋಟದ ಸುತ್ತಲು ನೇತಾಡಿಸಬೇಕು. ಇದು ಸಸ್ಯಗಳಿಗೆ ಒಳ್ಳೆಯ ರಕ್ಷಣೆ ನೀಡುವುದು ಎಂದು ಹೇಳಲಾಗುತ್ತದೆ.

4. ಜತೆ ಜತೆಗೆ ಸಸ್ಯಗಳನ್ನು ಬೆಳೆಸಿ: ಮನುಷ್ಯರು ಹೇಗೆ ಸ್ನೇಹ ಜೀವಿಯೋ ಅದೇ ರೀತಿ ಸಸ್ಯಗಳು ಕೂಡ ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿದೆ. ಕೆಲವೊಂದು ಸಸ್ಯಗಳಿಗೆ ಇತರ ಕೆಲವು ಸಸ್ಯಗಳು ಸ್ನೇಹಿತರಾಗಿರುತ್ತವೆ.

5. ನೀರಿನ ಮರುಬಳಕೆ : ಭೂ ಮೇಲಿನ ನೀರಿನ ಬಳಕೆಯನ್ನು ಮಿತಿಗೊಳಿಸಬೇಕು ಎನ್ನುವ ಮಾತು ಕೇಳಿಬರುತ್ತಿದೆ. ಇದರಿಂದ ಬಳಕೆ ಮಾಡಿದಂತಹ ನೀರನ್ನು ತೋಟಗಳಿಗೆ ಬಳಸಬೇಕು. ತರಕಾರಿ ತೊಳೆದ ಮತ್ತು ಮೊಟ್ಟೆ ಬೇಯಿಸಿದ ನೀರು ಸಸ್ಯಗಳಿಗೆ ಒಳ್ಳೆಯದು. ಇದು ಹೆಚ್ಚು ಇಳುವರಿ ನೀಡುವಂತೆ ಮಾಡುವುದು.

6. ಸಸ್ಯಗಳ ನಡುವಿನ ಅಂತರ : ಸಸ್ಯಗಳು ಸರಿಯಾಗಿ ಬೆಳೆಯಬೇಕಾದರೆ ಅವುಗಳನ್ನು ಸರಿಯಾದ ಅಂತದಲ್ಲಿ ಬಿತ್ತನೆ ಮಾಡಬೇಕು. ತರಕಾರಿ ಬೀಜಗಳನ್ನು ಬಿತ್ತನೆ ಮಾಡುವ ವೇಳೆ ನೀವು ಮಫಿನ್ ಟ್ರೇಗೆ ತೂತು ಮಾಡಿಕೊಂಡು ಬಳಸಬಹುದು.

7. ಹುಲ್ಲು ಬರದಂತೆ ಕಾರ್ಡ್ ಬೋರ್ಡ್(ಹಲಗೆ) ಬಳಸಿ: ತೋಟಗಾರಿಕೆಯಲ್ಲಿ ನೀವು ಬಳಸಬಹುದಾದ ಮತ್ತೊಂದು ವಸ್ತುವೆಂದರೆ ಅದು ಕಾರ್ಡ್ ಬೋರ್ಡ್. ನೀವು ಇಲ್ಲಿ ಮಾಡಬೇಕಾದ ಕೆಲಸವೆಂದರೆ ದಪ್ಪಗಿರುವಂತಹ ಕಾರ್ಡ್ ಬೋರ್ಡ್ ನ್ನು ಮುಚ್ಚುವುದು.

8 ಆದಷ್ಟು ಸಣ್ಣ ಸ್ಥಳದಲ್ಲಿ ಹೂಗಳನ್ನು ಬೆಳೆಸಿ: ಸಣ್ಣ ಸ್ಥಳದಲ್ಲಿ ಹೂಗಳನ್ನು ಬೆಳೆಸಿ ನಿಮ್ಮ ಉದ್ಯಾನ ವನವನ್ನು ಸುಂದರಗೊಳಿಸಲು ಸಾಧ್ಯ. ಉದ್ದನೆಯ ದಾಹಿಲಾಸ್ ಹಾಗೂ ಗ್ಲೋರಿಸೋಗಳನ್ನು ಕೈ ತೋಟದಲ್ಲಿ ಬೆಳೆಸಬಹುದು.

9. ಕಾಲಕಾಲಕ್ಕೆ ಅನುಗುಣವಾಗಿ ಸಸಿಗಳನ್ನು ನೆಡಿ: ಆಯಾ ಋತುವಿಗನುಸಾರವಾಗಿ ಬೆಳೆಯುವ ಸಸಿಗಳು ಯಾವಾಗಲೂ ನಿಮ್ಮ ಕೈತೋಟವನ್ನು ಸಮೃಧ್ಧಿಯಾಗಿ ಇರಿಸುತ್ತವೆ ಹಾಗೂ ವರ್ಷದ ಬಹುತೇಕ ಸಮಯ ಹಚ್ಚ ಹಸಿರಾಗಿರಿಸುತ್ತವೆ.

10. ಶೀಘ್ರವಾಗಿ ಬೆಳೆಯುವ ಸಸಿಗಳನ್ನು ಬೆಳೆಸಿರಿ: ಹೀಗೆ ಮಾಡುವುದರಿಂದ ನೀವು ಬೇಗನೇ ಕಟಾವು ಮಾಡಬಹುದು ಹಾಗೂ ಆ ಜಾಗದಲ್ಲಿ ಹೊಸ ಸಸಿಗಳನ್ನು ಬೆಳೆಸಬಹುದು.

11. ಉತ್ತಮ ಗುಣಮಟ್ಟದ ಮಣ್ಣು ಬಳಸಿ: ಮಣ್ಣಿನ ಗುಣಧರ್ಮವನ್ನು ಅರಿತುಕೊಳ್ಳಿ ನಿಮ್ಮ ಕೈತೋಟದ ಮಣ್ಣಿನ ಗುಣಧರ್ಮವನ್ನು ತಿಳಿದುಕೊಳ್ಳುವುದರಿಂದ, ನಿಮ್ಮ ಕೈತೋಟಕ್ಕೆ ಎಷ್ಟು ಬಾರಿ ನೀರುಣಿಸಬೇಕೆಂಬುದನ್ನು ನಿರ್ಣಯಿಸಲು ಸಹಕಾರಿಯಾಗುತ್ತದೆ. ತರಕಾರಿ ತೋಟ ಮಾಡಲು ನೆರಳಿನ ಪ್ರದೇಶ ಆಯ್ಕೆ ಮಾಡಬೇಡಿ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group