ಈ ಜ್ಯೂಸ್ ಸೇವಿಸಿ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪಾರಾಗಿ..!

ಕಿಡ್ನಿ ಸ್ಟೋನ್ ಈಗಿರುವ ಮಾಮೂಲಿ ರೋಗ. ಕಿಡ್ನಿ ಸ್ಟೋನ್ ಆದ್ರೆ ಈ ರೀತಿ ಮಾಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು.
ಕಿಡ್ನಿ ಸ್ಟೋನ್ ಸಮಸ್ಯೆಗೆ ಒಳಗಾಗಿದ್ದರೆ, ಆಹಾರದ ಜೊತೆಗೆ ಈ ಜ್ಯೂಸ್ ಸೇವಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಟೊಮೆಟೊ ರಸ ಪರಿಣಾಮಕಾರಿ. ಎರಡು ಟೊಮೆಟೊಗಳನ್ನು ಚೆನ್ನಾಗಿ ತೊಳೆದು, ಕತ್ತರಿಸಿಕೊಳ್ಳಿ. ಕಡ್ಡಾಯವಾಗಿ ಅದರ ಬೀಜಗಳನ್ನು ಬೇರ್ಪಡಿಸಿ ಪೇಸ್ಟ್ ಮಾಡಿಕೊಳ್ಳಿ.
ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಬೆರೆಸಿ, ಸ್ವಲ್ಪ ನೀರು ಸೇರಿಸಿ ಸೇವಿಸಿ. ಇದು ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಣಾಮಕಾರಿ. ಇನ್ನು ನಿಂಬೆ ರಸವೂ ಬಹು ಉತ್ತಮವಾದುದು. ಇದರಲ್ಲಿ ಸಿಟ್ರಿಕ್ ಆಮ್ಲವಿದೆ.
ಮೂತ್ರಪಿಂಡದ ಕಲ್ಲಿನ ಸಮಸ್ಯೆ ಇದ್ದಾಗ, ನಿಂಬೆ ರಸವನ್ನು ಸೇವಿಸಿದರೆ ಸಮಸ್ಯೆ ನಿವಾರಣೆಯಾಗುವುದು. ಒಂದು ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಸೇವಿಸಿ.
ಇದು ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಪರಿಹಾರವನ್ನು ಪಡೆಯಲು ಸಹಕಾರಿ.