ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ…

ಅರಣ್ಯ ನಮ್ಮ ಜೀವಾಳ. ಮನುಷ್ಯನ ಬದುಕಿಗೆ ಬೇಕಾದ ಎಲ್ಲ ಅಗತ್ಯತೆ ಪೂರೈಸುವ ಜೊತೆಗೆ ಆರೋಗ್ಯ ಪೂರ್ಣ ವಾತಾವರಣ ನಿರ್ಮಾಣ ಮಾಡುವಲ್ಲಿ ಅರಣ್ಯದ ಪಾತ್ರ ಮಹತ್ವದ್ದು ಇಂತಹ ಅರಣ್ಯ ಸಂರಕ್ಷಣೆಗಾಗಿ ಎಲ್ಲರೂ ಹೊಣೆಯಾಗಬೇಕಾಗಿದೆ
ಆದಿ ಕಾಲದಿಂದಲೂ ಅರಣ್ಯಗಳ ಪ್ರಭಾವ ಮನುಷ್ಯನ ಮೇಲೆ ಇದ್ದೇ ಇದೆ. ಮನುಷ್ಯ ಭೂಮಂಡಲದಲ್ಲಿ ವಿವಿಧೆಡೆ ಹರಡಿಕೊಳ್ಳುವಲ್ಲಿ ಅರಣ್ಯಗಳ ಪಾತ್ರ ಹಿರಿದು. ಕಾಡಿನಲ್ಲಿ ಮತ್ತು ಅದರ ಸುತ್ತಮುತ್ತ ವಾಸಿಸುವ ಗಿರಿಜನರ ಅಧ್ಯಾತ್ಮಿಕ ಹಾಗೂ ಧಾರ್ಮಿಕ ಜೀವನದ ಮೇಲೆ ಅದೂ ಗಾಢವಾದ ಪರಿಣಾಮ ಬೀರಿದೆ. ಮನುಕುಲದ ಆರ್ಥಿಕ ಬೆಳವಣಿಗೆಗೆ ಅತ್ಯಗತ್ಯವಾಗಿ ಬೇಕಾದ ಕಚ್ಚಾ ಸಾಮಗ್ರಿಗಳನ್ನು, ಮಾನವನಿಗೆ ಅರಣ್ಯೋತ್ಪನ್ನ ನೀಡುತ್ತ ಬಂದಿರುವುದು ಅರಣ್ಯವೇ ಮೂಲ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಇಂತಹ ಮಹತ್ವದ ಅರಣ್ಯವನ್ನು ಸರ್ವರೂ ರಕ್ಷಿಸಬೇಕಾಗಿದೆ
ಅರಣ್ಯಗಳ ಸಂರಕ್ಷಣೆ ಮತ್ತು ಪಾಳುಬಿದ್ದ ಅರಣ್ಯಗಳ ಪುನರ್ ನಿರ್ಮಾಣವನ್ನು ಮಾಡಬೇಕಾದ ತುರ್ತು ಅಗತ್ಯವಿದೆ. ಸರಕಾರದ ಮಟ್ಟದಲ್ಲಿ ಈ ದಿಶೆಯಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಹೀಗಿದ್ದರೂ ವ್ಯಕ್ತಿಯಾಗಿ ಸಮಾಜದ ಅಂಗ ಭಾಗವಾಗಿ ನಾವು ಮಾಡಬೇಕಾದ ಅನೇಕಹುಗಳಲ್ಲಿ ಬೇರು ಸಮೇತ ಮರ ಕೀಳುವುದನ್ನಾಗಲಿ ಅಥವಾ ಕಡಿದು ಉರುಳಿಸುವುದಾಗಲಿ ಸಾಧ್ಯವಾದಷ್ಟು ಪ್ರಯತ್ನಿಸಿ ತಡೆಯುವ ಪ್ರಯುತ್ನ ಮಾಡಬೇಕು…