ಹಿತ್ತಲ ತೋಟಗಾರಿಕೆಗೆ ಇಲ್ಲಿವೆ ಕೆಲವೊಂದು ಟಿಪ್ಸ್..!

ತೋಟಗಾರಿಕೆಯಲ್ಲಿ ಹಲವಾರು ವಿಧಗಳಿವೆ. ಆದರೆ ಇಂದಿನ ದಿನಗಳಲ್ಲಿ ಹಿತ್ತಲ ತೋಟಗಾರಿಕೆ ಟ್ರೆಂಡ್ ಆಗುತ್ತಿದೆ. ಹೆಚ್ಚಿನ ಗೃಹಿಣಿಯರು ಇಂದಿನ ದಿನಗಳಲ್ಲಿ ಸಮಯ ಕಳೆಯಲು ಮತ್ತು ಒಳ್ಳೆಯ ಫಲಿತಾಂಶಕ್ಕಾಗಿ ತೋಟಗಾರಿಕೆಯಲ್ಲಿ ತೊಡಗುತ್ತಾರೆ. ಹಿತ್ತಲ ತೋಟಗಾರಿಕೆಗೆ ಕೆಲವು ಸಲಹೆಗಳು ಹೀಗ ತಿಳಿಯೋಣ.

  1. ಸೂರ್ಯನ ಬೆಳಕಿರಲಿ: ನಿರ್ದಿಷ್ಟ ಪ್ರಮಾಣದಲ್ಲಿ ಸೂರ್ಯನ ಬೆಳಕು ಬೀಳುವಂತಹ ಹಿತ್ತಲನ್ನು ಆಯ್ಕೆ ಮಾಡಿಕೊಳ್ಳಿ. ಸೂರ್ಯನ ಬೆಳಕು ಸಸ್ಯಗಳಿಗೆ ಶಕ್ತಿಯ ಮೂಲ ಮತ್ತು ಇದು ಗಿಡಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಿನದಲ್ಲಿ ಕನಿಷ್ಠ 5-6 ಗಂಟೆಗಳ ಕಾಲ ಸಸ್ಯಗಳಿಗೆ ಸೂರ್ಯನ ಬೆಳಕು ಸಿಗಬೇಕು

2)ನೀರಿನ ವಿಷಯ : ತರಕಾರಿ ತೋಟ ಮಾಡಲು ಆಯ್ಕೆ ಮಾಡುವಂತಹ ಮಣ್ಣಿನಲ್ಲಿ ಸರಿಯಾದ ಪ್ರಮಾಣದ ನೀರಿನಾಂಶವಿರಲಿ. ಇದು ನೈಸರ್ಗಿಕವಾಗಿ ಒಣಗಲಿ. ಅತಿಯಾದ ನೀರು ಮತ್ತು ಕಡಿಮೆ ನೀರು ಸಸ್ಯಗಳಿಗೆ ಒಳ್ಳೆಯದಲ್ಲ.

3)ಮಣ್ಣನ್ನು ಹದಗೊಳಿಸಿ : ತರಕಾರಿ ತೋಟ ಮಾಡಲು ಬಯಸುವ ಜಾಗದ ಮಣ್ಣನ್ನು ನೀವು ಹದಗೊಳಿಸಬೇಕು. ಅಲ್ಲಿರುವ ಕಲ್ಲುಗಳು ಮತ್ತು ಬಿರುಕು ಬಿಟ್ಟಿರುವ ಜಾಗವನ್ನು ಸರಿಪಡಿಸಬೇಕು.

4)ಸಸ್ಯಗಳ ಆಯ್ಕೆ: ತೋಟಗಾರಿಕೆ ಮಾಡುವ ಮೊದಲು ನೀವು ಯಾವ ರೀತಿಯ ತರಕಾರಿ ಮತ್ತು ಹಣ್ಣುಗಳನ್ನು ಆಯ್ಕೆ ಮಾಡುತ್ತೀರಿ ಎಂದು ಮೊದಲು ನಿರ್ಧರಿಸಿ.

5)ಆರೈಕೆ :ಆರಂಭದ ಹಂತದಲ್ಲಿ ನಿಮ್ಮ ಗಿಡಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ಪ್ರತಿಯೊಂದು ಗಿಡಕ್ಕೂ ಭಿನ್ನ ರೀತಿಯ ಆರೈಕೆ ಬೇಕಾಗುತ್ತದೆ.

6)ನೀರು ಮತ್ತು ಸಸ್ಯಗಳು : ಗಿಡಗಳಿಗೆ ನಿಯಮಿತವಾಗಿ ನೀರು ಸಿಂಪಡಿಸುವುದು ತುಂಬಾ ಮುಖ್ಯ. ಒಂದು ದಿನ ನೀರು ಕುಡಿಯದೆ ಉಳಿಯಲು ನಿಮಗೆ ಸಾಧ್ಯವೇ? ನಿಯಮಿತವಾಗಿ ನೀರು ಹಾಕದೆ ಇದ್ದರೆ ಗಿಡಗಳಿಗೂ ಇದೇ ಪರಿಸ್ಥಿತಿ ಉಂಟಾಗುತ್ತದೆ. ಗಿಡ ತುಂಬಾ ಸಣ್ಣದಿರುವಾಗ ಅದಕ್ಕೆ ನೀರು ಅಗತ್ಯವಾಗಿ ಬೇಕಾಗುತ್ತದೆ. ಯಾಕೆಂದರೆ ಅದರ ಬೇರುಗಳು ಆಳಕ್ಕೆ ಹೋಗಿ ನೀರನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವುದಿಲ್ಲ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group