ವಾನರ ವನ

ಕಪಿಗಳು ಮತ್ತು ವಾತಾವರಣವನ್ನು ಅವಂಲಬಿಸಿರುವ ಇತರ ಪ್ರಾಣಿ ಪಕ್ಷಿಗಳು ಕಲಿಯುಗದಲ್ಲಿ ಪಡುವ ಕಷ್ಟಗಳು ಶಬ್ದಗಳಿಗೆ ನಿಲುಕದ್ದು, ಹಸಿವಿನ ಆಕ್ರಂದನ ಯಾರಿಗಾದರೂ ತಟ್ಟದೇ ಇರದು. ಪ್ರವಾಸಿಗರು ಕೊಡುವ ಕೃತಕ ಆಹಾರ ಜೀರ್ಣ ಆಗದೆ ಕಪಿಗಳು ಮತ್ತು ವಾತಾವರಣವನ್ನು ಆವಲಂಬಿಸಿರುವ ಇತರ ಪ್ರಾಣಿ ಪಕ್ಷಿಗಳು ಒದ್ದಾಡುವ ಸ್ಥಿತಿ ನಿರ್ಮಾಣ ಆಗಿದೆ. ಇದನ್ನು ಗಮನಿಸಿ ಕರ್ನಾಟಕ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಮತ್ತು ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಒಂದು ಸ್ಪರ್ಧೆಯನ್ನು ಕೈಗೆತ್ತಿ ಕೊಂಡಿದೆ ಅದುವೇ ʻʻವಾನರ ವನ”.

🐵🐒🐿🦫🐇🦔🦇🦥🦨🕊🦋🐝🌲🌴🪴🦧

ಸ್ಪರ್ಧೆಯ ನಿಯಮಗಳು:

 1. ಒಂದು ಸಂಸ್ಥೆ ದೀರ್ಘಾವಧಿ ಫಲಕೊಡುವ 15 ಹಣ್ಣಿನ ಗಿಡಗಳನ್ನು ನೆಡಬೇಕು. (ಗಿಡಗಳನ್ನು ತಾವೇ ಸ್ವತಃ ವ್ಯವಸ್ಥೆ ಮಾಡಿಕೊಳ್ಳಬೇಕು ಅಥವಾ ಸಮೀಪದ ಅರಣ್ಯ ಇಲಾಖೆ ಅಥವಾ ಸಾಮಾಜಿಕ ಅರಣ್ಯವನ್ನು ಸಂಪರ್ಕಿಸಬಹುದು) ಇದು ಕರ್ನಾಟಕ ರಾಜ್ಯ ಮಟ್ಟದ ಸ್ಪರ್ಧೆಯಾಗಿರುತ್ತದೆ.
 2. 2022 ಜೂನ್ 5 ರಿಂದ ಜುಲೈ 15ರ ವರೆಗೆ ನೀವು ಗಿಡಗಳನ್ನು ನೆಟ್ಟು ಈ ಕಾರ್ಯಕ್ರಮ ಉದ್ದೇಶದ ಜಾಗೃತಿಯನ್ನು ಮಾಡಿ ಕಾರ್ಯಕ್ರಮದ ಛಾಯಚಿತ್ರಗಳನ್ನು ನಮಗೆ ಕಳುಹಿಸಿಕೊಡಬೇಕು.
 3. ನಮಗೆ ಕಳುಹಿಸಿದ ಛಾಯಚಿತ್ರದಲ್ಲಿ ಆದಷ್ಟು ನಮ್ಮ ಸಂಘಟನೆಯ ಸದಸ್ಯರನ್ನು ಸೇರಿಸಿಕೊಳ್ಳಿ.
 4. 2022 ಅಗಸ್ಟ್ 15ರಂದು ವಿಜೇತರನ್ನು ಪ್ರಕಟಿಸಲಾಗುವುದು. ಬಹುಮಾನ ವಿತರಣೆಯು 15 ದಿನ ಮುಂಚಿತವಾಗಿ ವಿಜೇತರಿಗೆ ತಿಳಿಸಲಾಗುವುದು.
 5. ಯಾರಾದರೂ ವೈಯುಕ್ತಿಕವಾಗಿ ಈ ಸ್ಪರ್ಧೆಯಲ್ಲಿ ಇಚ್ಚಿಸಿದಲ್ಲಿ ಅವಕಾಶವಿದೆ. ನಿಮ್ಮ ಪರಿಸರದ 10 ನಾಗರೀಕರನ್ನು ಸೇರಿಸಿ ತಂಡಕ್ಕೊಂದು ಹೆಸರಿಟ್ಟು ಭಾಗಿಯಾಗಿ.

ಅರ್ಜಿ ಯಾರು ಸಲ್ಲಿಸಬಹುದು?

 1. ಧಾರ್ಮಿಕ ಸಂಘ-ಸಂಸ್ಥೆಗಳು.
 2. ಯಾವುದೇ ನೋಂದಾಯಿತ/ ನೋಂದಾಯಿತವಲ್ಲ ಸಂಘ ಸಂಸ್ಥೆಗಳು ಅರ್ಜಿಗಳನ್ನು ಸಲ್ಲಿಸಬಹುದು.
 3. ಶಾಲಾ-ಕಾಲೇಜು ಮತ್ತು ಇಚ್ಚಿಸುವ ಯಾವುದೇ ಶಿಕ್ಷಣ ಸಂಸ್ಥೆಗಳು.
 4. ಯಾವುದೇ ಸರಕಾರಿ ಅಥವಾ ಅರೆ ಸರಕಾರಿ ಸಂಸ್ಥೆಗಳು.
 5. ಸ್ವಸಹಾಯ ಸಂಸ್ಥೆ, ಮಹಿಳಾ ಸಂಘಟನೆ, ಯುವಕ-ಯುವತಿ ಮಂಡಲಗಳು.
 6. ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ಸಂಸ್ಥೆ ಇತರೆ ಸರಕಾರಿ/ಖಾಸಗಿ ಕಛೇರಿಯವರು ಕೂಡ ಅರ್ಜಿ ಸಲ್ಲಿಸಬಹುದು.

ಗಿಡಗಳನ್ನು ನೆಡಲು ಮಾನದಂಡ:

 1. ಸಸಿಗಳನ್ನು ನೆಡುವಾಗ ರಸ್ತೆ ಅಗಲೀಕರಣ, ಸರ್ಕಾರಿ ಜಮೀನು ಮತ್ತು ಇತರ ಉದ್ದೇಶಗಳಿಗೆ ಭೂಸ್ವಾಧೀನ ಆಗುವಂತಹ ಪ್ರದೇಶವನ್ನು ಬಿಡಬೇಕು. ಸಸಿಗಳು ಬೆಳೆದು ನುರಾರು ವರ್ಷ ಪ್ರಾಣಿ-ಪಕ್ಷಿಗಳಿಗೆ ಉಪಯೋಗವಾಗುವಂತಹ ಪ್ರದೇಶದಲ್ಲಿ ನೆಡಬೇಕು ಮತ್ತು ಪೋಷಿಸಬೇಕು.
 2. ಗಿಡಗಳನ್ನು ಧಾರ್ಮಿಕ ಕ್ಷೇತ್ರಗಳ ವಠಾರ, ಉದ್ಯಾನವನ, ಅರಣ್ಯ ಇಲಾಖೆಯ ಜಾಗ, ಸಾಮಾಜಿಕ ಅರಣ್ಯ ಇಲಾಖೆಯ ಜಾಗ, ಸರಕಾರಿ ಜಾಗ, ಸಂಘ ಸಂಸ್ಥೆಗಳಿಗೆ ಮೀಸಲಿಟ್ಟ ಪ್ರದೇಶ, ಇಕ್ಕೆಲ, ಸರಕಾರಿ ಶಾಲೆ, ಕಾಲೇಜು ಇಂತಹ ಸ್ಥಳಗಳನ್ನೇ ಆಯ್ಕೆ ಮಾಡಬೇಕು.
 3. ಒಂದು ಸಂಸ್ಥೆ ನೆಡುವ ಎಲ್ಲಾ 15 ಗಿಡಗಳು ಎಲ್ಲಿಯಾದರೂ ಒಂದೇ ಕಡೆ ಬರುವ ಹಾಗೆ ಏಕ ಮುಖವಾಗಿ ಕಾಣುವ ಹಾಗೆ ನೆಡಬೇಕು.
 4. ನೆಡ್ಡ ಗಿಡಗಳನ್ನು ತಮ್ಮ ಸಂಘಟನೆಯ ಸದಸ್ಯರ ಹಾಗೆ ನೋಡಿಕೊಂಡು ಪೋಷಿಸಿಕೊಂಡು ಅದರ ಆರೈಕೆ ಮಾಡುತ್ತಾ ಬರಬೇಕು.

ವಾನರ ವನ ಸ್ಪರ್ಧೆಯು ಆಯೋಜಕರ ತಿರ್ಮಾನವೇ ಅಂತಿಮ. ವಿಜೆತರಾಗಿ ಆಯ್ಕೆಯಾದ ಸಂಸ್ಥಗಳ ಸ್ಥಳಕ್ಕೆ ಬಹುಮಾನ ಕೊಡುವ ಮುಂಚಿತವಾಗಿ ಭೇಟಿ ನೀಡಿ ಕಳುಹಿಸಿದ ಮಾಹಿತಿಯನ್ನು ಪುನರ್ ಪರಿಶೀಲನೆ ಮಾಡಲಾಗುವುದು. ಪರಿಸರ ಕಾಳಜಿಯೇ ಈ ಸ್ಪರ್ಧೆಯ ಹಿಂದಿರುವ ಕಾಳಜಿ.

ಬಹುಮಾನಗಳು

• ರಾಜ್ಯಕ್ಕೆ ಒಂದು ಬಂಪರ್ ಬಹುಮಾನ.

• ಪ್ರತಿಯೊಂದು ಜಿಲ್ಲೆಗೆ ಸಂಘ ಸಂಸ್ಥೆಗಳಿಗೂ ಗಣ್ಯರ ಸಹಿ ಇರುವ ಸರ್ಟಿಫಿಕೇಟ್ ನೀಡಲಾಗುವುದು.

• ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೂ ಗಣ್ಯರ ಸಹಿ ಇರುವ ಮಾನ್ಯತ ಸರ್ಟಿಫಿಕೇಟ್ ನೀಡಲಾಗುವುದು.

ವಾನರ ವನ ಕಾರ್ಯಕ್ರಮವನ್ನು ನಡೆಸಿ ವರದಿ ಸಲ್ಲಿಸುವ ಲಿಂಕ್:

http://bit.ly/376X94R

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group