ಸಾವಯವ ಕೃಷಿಗೆ ಆರು ಮುಖ್ಯ ಆಧಾರ ಸ್ಥಂಭಗಳು ಯಾವುವು ನಿಮಗೆ ಗೊತ್ತೇ…??

ಸಾವಯವ ಕೃಷಿಯಲ್ಲಿರುವ ಆರು ಆಧಾರ ಸ್ಥಂಭಗಳು ಯಾವುವು? (organic farming six fundamentals)

ಮಣ್ಣಿನ ನಿರ್ವಹಣೆ. ಮಿಶ್ರಬೆಳೆ, ಹಸಿರೆಲೆ ಗೊಬ್ಬರ, ದೇಸಿ ಜಾನುವಾರುಗಳ ಬಳಕೆ, ನೈಸರ್ಗಿಕ ಸಂಪನ್ಮೂಲ ಬಳಕೆ,

ಹಾನಿಕಾರಕ ಜೀವಿಗಳ ನಾಶ ಇವು ಆರು ಸಾವಯವ ಕೃಷಿಯಲ್ಲಿರುವ ಆಧಾರ ಸ್ಥಂಭಗಳು, ಇವುಗಳ ಕುರಿತು ಸಮಗ್ರವಾಗಿ ಇಲ್ಲಿ ಮಾಹಿತಿ ನೀಡಲಾಗಿದೆ.

  1. ಮಣ್ಣಿನ ನಿರ್ವಹಣೆ
    ಕೃಷಿಯಲ್ಲಿ ಮಣ್ಣೇ ಆಧಾರವೆಂಬುದು ಪ್ರತಿಯೊಬ್ಬರಿಗೂ ಗೊತ್ತಿದ್ದ ಸಂಗತಿ. ಮಣ್ಣಿಲ್ಲದಿದ್ದರೆ ವ್ಯವಸಾಯವಿಲ್ಲ. ಕೃಷಿ ನಿಂತಿರುವುದೇ ಮಣ್ಣಿನ ಮೇಲೆ. ಸಾವಯವ ಕೃಷಿಯಲ್ಲಿ ಮಣ್ಣಿನಲ್ಲಿ ಯಾವುದೇ ರಾಸಾಯನಿಕ ಬಳಸುವುದಿಲ್ಲ. ಮಣ್ಣಿನಲ್ಲಿ ಕೊಟ್ಟಿಗೆಗೊಬ್ಬರ, ಜೈವಿಕಗೊಬ್ಬರ, ಎರೆಹುಳುಗೊಬ್ಬರವನ್ನು ಬಳಸಲಾಗುತ್ತದೆ.

2) ಮಿಶ್ರ ಬೆಳೆ (multi crops)

ಹಿಂದಿನ ಕಾಲದಲ್ಲಿ ಏಕ ಬೆಳೆಗಿಂತ ಬಹುಬೆಳೆಗೆ ಮಹತ್ವ ಕೊಡುತ್ತಿದ್ದರು. ಇನ್ನೊಬ್ಬರ ಮೇಲೆ ಅವಲಂಬನೆಯಾಗದೆ ಮನೆಗೆ ಬೇಕಾಗುವ ಎಲ್ಲಾ ತರಹದ ಬೆಳೆಗಳನ್ನು ಬೆಳೆಸುತ್ತಿದ್ದರು ಎಂಬುದು ನಮಗೆಲ್ಲಾ ಗೊತ್ತು. ಆದರೆ ಇಂದು ಹೆಚ್ಚು ಗಳಿಕೆ ಮಾಡುವುದಕ್ಕಾಗಿ ಏಕಬೆಳೆಗೆ ಮೊರೆ ಹೋಗುತ್ತಿರುವುದು ದುರದೃಷ್ಟಕರ ಸಂಗತಿ. ಮನೆಗೆ ಅಗತ್ಯವಾಗಿ ಬೇಕಾಗುವ ಬೆಳೆಯನ್ನು ಸಹ ಬೆಳೆಸದೆ ಏಕಬೆಳೆಗೆ ಮಾರುಹೋಗಿದ್ದೇವೆ.

3) ನೈಸರ್ಗಿಕಸಂನ್ಮೂಲಗಳ ಬಳಕೆ

ಸಾವಯವ ಕೃಷಿಯಲ್ಲಿ ಮಿಶ್ರಬೆಳೆ ಬೆಳೆಯಬೇಕು. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಗುತ್ತದೆ.ನೈಸರ್ಗಿಕ ಸಂಪನ್ಮೂಲ ಬಳಕೆ ಸಾವಯವ ಕೃಷಿಯಲ್ಲಿ ನೈಸರ್ಗಿಕ ವಿಧಾನದ ಮೂಲಕ ಕೃಷಿ ಮಾಡಲಾಗುತ್ತದೆ.

4) ದೇಸಿ ಜಾನುವಾರುಗಳ ಬಳಕೆ

ಉಳುಮೆಗೆ ಟ್ರಾಕ್ಟರ್ಗಳ್ಳನ್ನು ಬಳಸುವುದಿಲ್ಲ. ಉಳುಮೆಗೆ ಎತ್ತುಗಳು, ಮರದ ನೇಗಿಲು ಬಳಸಲಾಗುತ್ತದೆ. ಕಳೆನಾಶಕ ಸಿಂಪಡಿಸುವುದಿಲ್ಲ. ಬೆಳೆಯ ಮಧ್ಯದಲ್ಲಿರುವ ಕಳೆ ಕೀಳಲು ಕತ್ತಿ, ಕುಡುಗೋಲುನಂತಹ ಉಪಕರಣ ಬಳಸಲಾಗುತ್ತದೆ. ಕೂರಿಗೆಯಿಂದಲೇ ಬಿತ್ತನೆ ಮಾಡಲಾಗುತ್ತದೆ.ದೇಸಿ ಜಾನುವಾರುಗಳ ಬಳಕೆ ಸಾವಯವ ಕೃಷಿಯಲ್ಲಿ ದೇಸಿ ಜಾನುವಾರಗಳ ಬಳಕೆ ಮಾಡಲಾಗುತ್ತದೆ. ಜಾನುವಾರುಗಳಿಲ್ಲದೆ ಸಾವಯವ ಕೃಷಿ ಅಸಾಧ್ಯ. ಜಾನುವಾರುಗಳ ಮೂಲಕ ಸೆಗಣಿ, ಗೋಮುತ್ರ ಸಾವಯವ ಕೃಷಿಗೆ ಮಹತ್ವ. ಬೆಳೆ ಕಟಾವಾದ ನಂತರ ಕೃಷಿ ಭೂಮಿಯಲ್ಲಿ ಕುರಿಗಳ ಹಿಂಡು ನಿಲ್ಲಿಸುತ್ತಿದ್ದರು. ಕುರಿ, ಮೇಕೆಗಳ ಗೊಬ್ಬರ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುತ್ತದೆ.

5) ಹಸಿರೆಲೆ ಗೊಬ್ಬರ (Green manure)

ರೈತನ ದೊಡ್ಡ ಶತ್ರು ಕಳೆ. ಕಳೆಯ ನಿರ್ವಹಣೆ ಮಾಡುವುದು ರೈತರಿಗೆ ಸವಾಲಿಗೆ ಕೆಲಸವಾಗಿದೆ. ಬಿತ್ತಿದ ಕೂಡಲೇ ಬೀಜ ಮೊಳಕೆಯೊಡೆಯುವದರ ಹಿಂದೆ ಕಾಡುವುದು ಕಳೆ. ಈ ಕಳೆಯಿಂದಲೇ ಗೊಬ್ಬರ ಮಾಡುವುದು ಒಂದು ಕಲೆ. ಸಾವಯವ ಪದ್ಧತಿಯಲ್ಲಿ ಕಳೆ ಬೆಳೆಯದಂತೆ ಬೆಳೆಗಳ ನಡುವೆ ಹಸಿರೆಲೆ ಗೊಬ್ಬರವಾಗುವ ಡಯಾಂಚ, ಬೀನ್ಸ್, ಅಲಸಂದಿ ಬೆಳೆಸಿ ಹಸಿರೆಲೆ ಗೊಬ್ಬರವಾಗಿ ಪರಿವರ್ತಿಸುತ್ತಾರೆ.

6) ಹಾನಿಕಾರಕ ಕೀಟಗಳು (Pesticide)

ಕೃಷಿಯಲ್ಲಿ ರೈತರಿಗೆ ಎರಡನೇ ದೊಡ್ಡ ಶತ್ರು ಬೆಳೆಗಳಿಗೆ ತಗಲುವ ಕೀಟಗಳು.ಆ ಕೀಟಗಳ ನಿರ್ವಹಣೆಗೆ ರೈತರು ಸಾವಯವ ಕೃಷಿಯಲ್ಲಿ ಗಿಡಗಂಟಿಂಗಳಿಂದ ಕಷಾಯ ಮಾಡಿ ಸಿಂಪರಣೆ ಮಾಡುತ್ತಾರೆ. ಇದು ಸ್ವಲ್ಪ ತಡವಾದರೂ ಕೆಲಸ ಮಾಡುತ್ತದೆ. ಆದರೆ ಇಂದು ರೈತರು ಕ್ಷಣದಲ್ಲಿ ಹುಳುಗಳ ನಾಶ ಮಾಡಲು ರಾಸಾಯನಿಕ ಔಷಧ ಬಳಸುತ್ತಾರೆ. ಇದರಿಂದ ಬೆಳೆಯು ರಾಸಾಯನಿಕವಾಗಿ ಆರೋಗ್ಯ ಹಾಳಾಗುತ್ತದೆ. ಸಾವಯವ ಕೃಷಿಯಲ್ಲಿ ಸಾವಯವ ಔಷಧಗಳಿಂದಲೇ ಬೆಳೆಗಳಿಗೆ ತಗಲುವ ರೋಗ, ಕೀಟ ಬಾಧೆ ನಿಯಂತ್ರಣ ಮಾಡಲಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group