ತುಂಬೆ ಹೂವು ಸುಲಭ ಮನೆ ಮದ್ದು…! ಹೇಗೆ ತಿಳಿಯಬೇಕೆ..?

ತುಂಬೆ ಹೂವು ಪೂಜೆಗಳಲ್ಲಿ ಬಳಕೆಯಾಗುವ ಶ್ರೇಷ್ಠ ಹೂವು ವಿಶೇಷ ಪ್ರಯತ್ನವಿಲ್ಲದೆ ಎಲ್ಲ ಕಡೆಗಳಲ್ಲೂ ಬೆಳೆಯುವ ಗಿಡ ಬೀಜದಿಂದ ಗಿಡ ಬೆಳೆಸಿ ಎರಡು ಮೂರು ತಿಂಗಳ ಬಳಿಕ ಬಳಸಬಹುದು .ಸ್ವಲ್ಪ ತೇವಾಂಶ ಹಾಗೂ ಮರಳು ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುವ ತುಂಬೆಗೆ ಸಂಸ್ಕೃತದಲ್ಲಿ “ದ್ರೋಣ ಪುಷ್ಪ ” ಎನ್ನಲಾಗುವುದು.

ಇದರ ಹೂ ಕಾಂಡ ಜ್ವರ,ಕಾಮಾಲೆ,ಚರ್ಮ ರೋಗ, ಶೀತ,ನೆಗಡಿ ಮುಂತಾದ ರೋಗಗಳಿಗೆ ಉಪಯುಕ್ತ

ಇದರ ಮುಖ್ಯ ಔಷದಿ ಗುಣಗಳು ಎಂದರೆ…

೧.ಒಣಗಿದ ಶುಭ್ರವಾದ ಎಲೆ ಹೂ ಮತ್ತು ಕಾಂಡವನ್ನು ಚೆನ್ನಾಗಿ ಜಜ್ಜಿಪುಡಿ ಮಾಡಬೇಕು.ಎರಡು ಚಮಚ ಪುಡಿಗೆ ಎರಡು ಲೋಟ ನೀರು ಬೆರೆಸಿ ಕುದಿಸಿ ಅರ್ದ ಲೋಟಕ್ಕೆ ಇಂಗಿಸಬೇಕು.ನಂತರ ಶೋಧಿಸಿ ಪ್ರತಿ ಸಾರಿ ಕಾಲು ಲೋಟಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಜ್ವರ ಕಡಿಮೆಯಾಗುತ್ತದೆ.

೨.ಬಹಳ ಹಳೆಯದಾದ ಚರ್ಮ ರೋಗಗಳು ಮತ್ತು ನೋವಿನಿಂದ ಊತಗಳಲ್ಲಿ ತುಂಬೆ ಎಳೆಯ ರಸವನ್ನು ಲೇಪಿಸುವುದರಿಂದ ಬಹಳ ಒಳ್ಳೆಯ ಪರಿಣಾಮ ಕಂಡು ಬರುತ್ತದೆ.

೩. ತುಂಬೇ ಎಲೆಗೆ ಕಾಲು ಬಾಗ ಬೆಲ್ಲ ಸೇರಿಸಿ ಅರೆದು ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತ್ತದೆ.

೪.ನೆಗಡಿ ಶೀತದಲ್ಲಿ ತುಂಬೆ ಹೂಗಳ ರಸ ಹತ್ತರಿಂದ ಮೂವತ್ತು ಹನಿ ಹಾಗೆಯೇ ಜೇನುತುಪ್ಪ ಇಪ್ಪತ್ತರಿಂದ ಮೂವತ್ತು ಹನಿ ಬೆರೆಸಿ ಅದಕ್ಕೆ ಅರ್ದ ಚಿಟಿಕೆ ಬಿಳಿಯಾದ ಹುಡಿ ಸೇರಿಸಿ ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಆಹಾರಕ್ಕೆ ಮುಂಚೆ ಸೆವಿಸುದರಿಂದ ಶೀತ,ನೆಗಡಿ ಕಡಿಮೆಯಾಗುತ್ತದೆ.

೫. ಈ ತುಂಬೆ ರಸವನ್ನು ಆರು ಚಮಚ ದೊಂದಿಗೆ ಮೂರು ಚಮಚ ಜೇನಿನೊಂದಿಗೆ ಸೇವಿಸಿದರೆ ಕಾಮಾಲೆ ರೋಗ ನಿವಾರಣೆಯಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group