ಬಿದ್ದ ಸಣ್ಣ ಸಣ್ಣ ಮೊಳಕೆಗಳಿಂದ ದೊಡ್ಡ ಮರವನ್ನಾಗಿಸೋಣ ಬನ್ನಿ..!

ಪರಿಸರವೇ ನಮ್ಮ ಉಸಿರು ಎನ್ನೊ ವೇದ ವಾಕ್ಯವು ನಮ್ಮ ಮುಂದಿನ ಪೀಳಿಗೆಯ ಜನಾಂಗದವರು ಈ ಮಾತುಗಳನ್ನು ಅನುಸರಿಸಬೇಕಾದರೆ. ನಾವು ಈಗಾಗಲೆ ಪರಿಸರ ಸಂರಕ್ಷಣೆಗಾಗಿ ನಮ್ಮಿಂದ ಎಷ್ಟೂ ಸಾದ್ಯವೊ ಅಷ್ಟು ಪರಿಸರ ಸಂರಕ್ಷಣೆಗಾಗಿ ಶ್ರಮಿಸೊಣ
ಪರಿಸರ ಸಂರಕ್ಷಣೆ ಎಂದರೆ ಕೆಲವರ ಊಹೆಯ ಪ್ರಕಾರ ಲಕ್ಷ ಗಟ್ಟಲೆ ಗಿಡ ಮರಗಳನ್ನು ನೆಡೆವುದು ಎಂಬ ಊಹೆ ತಪ್ಪು. ಪರಿಸರ ಸಂರಕ್ಷಣೆ ಎಂದರೆ ದಿನವೊಂದರಲ್ಲಿ ಪರಿಸರಕ್ಕೆ ನಮ್ಮಿಂದ ಏನು ಪ್ರಯೊಜನವಾಯಿತು ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿ ಕೊಳ್ಳಬೇಕು ಆಗ ನಮ್ಮಲ್ಲಿ ಆ ಪ್ರಶ್ನೆಗೆ ಯಾವುದೇ ಉತ್ತರವಿಲ್ಲದೆ ಸ್ತಬ್ದರಾಗುತ್ತೆವೆ ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಈಗಾಲಾದರು ಪರಿಸರ ಸಂರಕ್ಷಣೆಗಾಗಿ ಕೈ ಜೊಡಿಸೊಣ.
ಈಗಾಗಲೇ ಮಳೆಗಾಲ ಆರಂಭಗೊಳ್ಳುವ ಸಮಯ. ಸಾಕಷ್ಟು ಮಾವಿನ ಮರಗಳು ಮಾವಿನ ಹೂ ಬಿಟ್ಟು ಕಾಯಿ ಮಾತು ಹಣ್ಣು ಆಗಿ ಅದನ್ನು ಯಾರು ಕೊಯ್ಯದೆ ಅಥವಾ ಪಕ್ಷಿಗಳು ತಿಂದು ಕೆಳಗೆ ಬಿದ್ದು ಹಾಳಗುತ್ತದೆ. ಆ ಬಿದ್ದ ಮಾವಿನ ಬೀಜಗಳಲ್ಲಿ ಸಿರಿ ಮೊಳೆತು ಗಿಡಗಳಾಗಿ ಬೆಳೆಯುತ್ತದೆ ಆ ಗಿಡಗಳನ್ನು ಅಲ್ಲಿಯೆ ಬಿಟ್ಟರೆ ಸಾಯುತ್ತದೆ ಹಾಗಗಿ ನಾವು ಆ ಎಲ್ಲ ಗಿಡಗಳನ್ನು ಬೆರೂ ಸಮೆತ ಜಾಗ್ರತೆಯಿ೦ದ ಕಿತ್ತುತೆಗೆದು ಅಲ್ಲೆ ನಮ್ಮ ಅಕ್ಕ ಪಕ್ಕದ ಪರಿಸರಲ್ಲಿ ಹೊ೦ಡ ತೆಗೆದು ನೆಡಬೆಕು.
ನಮಗೆ ಗಿಡವನ್ನು ನೆಡೆಯಲು ಪುರುಸೊತ್ತು ಇಲ್ಲದಿದ್ದರೆ ಆ ಎಲ್ಲ ಗಿಡಗಳನ್ನು ಬೇರು ಸಮೇತ ಕಿತ್ತು ಅರಣ್ಯಾಧಿಕರಿಗಳಿಗೆ. ಕೊಡಬೇಕು ಆಗ ಅವರು ಆ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ನೆಡೆಯವುದರ ಮೂಲಕ ಪರಿಸರ ಸಂರಕ್ಷಣೆಯಲ್ಲಿ ನಮ್ಮದೊಂದು ಅಳಿಲು ಸೇವೆ ಸಲ್ಲಿಸಿದಂತೆ ಆಗುವುದು….