ಆಯುರ್ವೇದ

ಆಯುರ್ವೇದ

ಆಯುರ್ವೇದವು ಭಾರತದಲ್ಲಿ ಹುಟ್ಟಿದ ಔಷಧ ಮತ್ತು ಚಿಕಿತ್ಸಾ ಪದ್ಧತಿಯಾಗಿದೆ.. ಆಯುರ್ವೇದ ಆಧಾರಿತ ಚಿಕಿತ್ಸೆಯು ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಆಧರಿಸಿ ರೂಪಿಸಲಾಗುತ್ತದೆ ಮತ್ತು ಯಾವುದೇ ಅಡ್ಡಪರಿಣಾಮಗಳಿಂದ ಮುಕ್ತವಾಗಿರುತ್ತದೆ. ಆಧುನಿಕ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಔಷಧಿಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ನಂಬಲಾಗಿದೆ.

ಇತಿಹಾಸ: ಆಯುರ್ವೇದದ ಮೂಲ ಶುಶ್ರುತ ಸಂಹಿತೆಯಲ್ಲಿದೆ. ಇದನ್ನು ಅನಾದಿ ಕಾಲದ ವೈದ್ಯ – ಶುಶ್ರುತ ಕ್ರಿ.ಪೂ 6 ನೇ ಶತಮಾನದಲ್ಲಿ ಬರೆದಿದ್ದಾನೆಂದು ನಂಬಲಾಗಿದೆ.
ಆಧುನಿಕ ಔಷಧಿಗಳು ರೋಗಲಕ್ಷಣಗಳ ಮೇಲೆ ಗಮನ ಕೇಂದ್ರೀಕರಿಸಿ ಅವುಗಳ ನಿರ್ಮೂಲನೆಗೆ ಪ್ರಯತಿಸಿದರೆ ಆಯುರ್ವೇದವು ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿ ದೇಹದ ಜೀವಕೋಶಗಳನ್ನು ಒಳಗಿನಿಂದ ಬಲಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತವೆ. ಇದರಿಂದಾಗಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಶೀಘ್ರ ಚೇತರಿಕೆಗೆ ಅನುವಾಗುತ್ತದೆ.

ಔಷಧಿ: ಗಿಡಮೂಲಿಕೆಗಳು ಮತ್ತು ನೈಸರ್ಗಿಕ ವಸ್ತುಗಳನ್ನು ಬಳಸಿ&ಟಿbsಠಿ; ಆಯುರ್ವೇದದ ತತ್ವಗಳ ಮೇಲೆ ತಯಾರಿಸಿದ ಹಲವಾರು ಔಷಧಿಗಳನ್ನು ಸಾಮಾನ್ಯ ಔಷಧ ಅಂಗಡಿಗಳಲ್ಲಿ, ಆಯುರ್ವೇದ ಔಷಧಿಗಳಿಗಾಗಿ ಇರುವ ವಿಶೇಷ ಅಂಗಡಿಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಖರೀದಿಸಬಹುದಾಗಿದೆ.

ಆಯುರ್ವೇದ ಚಿಕಿತ್ಸೆಗಳು: ಪಂಚಕರ್ಮ ಚಿಕಿತ್ಸೆ, ಪಥ್ಯ (ಸೇವಿಸುವ ಆಹಾರದ ನಿಯಂತ್ರಣ), ಉಲ್ಲಾಸ ನೀಡುವ ಆಯುರ್ವೇದಿ ಮಸಾಜ್ಗಳು, ಹಬೆಯಲ್ಲಿ ಸ್ನಾನ ಮಾಡುವುದು ಮತ್ತು ಇತರ ಚಿಕಿತ್ಸೆಗಳು ನಮ್ಮ ದೇಹವನ್ನು ಪುನಃ ಚೇತನಗೊಳಿಸುತ್ತವೆ. ದಿನವಿಡೀ ಸುತ್ತಾಡಿ ದಣಿದ ಪ್ರವಾಸಿಗರು ದಿನದ ಕೊನೆಯಲ್ಲಿ ಆಹ್ಲಾದಕರ ಆಯುರ್ವೇದ ಮಸಾಜ್ ಪಡೆಯಲು ಇಚ್ಚಿಸುತ್ತಾರೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group