ಧ್ಯಾನ

ಧ್ಯಾನ, ವ್ಯಕ್ತಿಯ ಮನಸ್ಸಿನ ತರಬೇತಿ ಅಥವಾ ಅರಿವಿನ ಒಂದು ಕ್ರಮವನ್ನು ಉಂಟುಮಾಡುವ ಆಚರಣೆಯಾಗಿದೆ. ಧ್ಯಾನ ಎಂಬ ಪದವು ವಿವಿಧ ವಿಶಾಲ ಆಚರಣೆಗಳನ್ನು ಸೂಚಿಸುತ್ತದೆ. ಅದು ಕೆಲವು ತಂತ್ರಗಳನ್ನು ಒಳಗೊಂಡಿದೆ. ಅವು ವಿಶ್ರಾಂತಿ, ಆಂತರಿಕ ಶಕ್ತಿ ಅಥವಾ ಜೀವ ಶಕ್ತಿ ನಿರ್ಮಿಸುವ ತಂತ್ರಗಳಾಗಿವೆ. ಮತ್ತು ಸಹಾನುಭೂತಿ ಅಭಿವೃದ್ಧಿ, ಪ್ರೀತಿ, ತಾಳ್ಮೆ, ಉದಾರತೆ ಮತ್ತು ಕ್ಷಮೆ ಇವುಗಳೂ ವಿಕಾಸವಾಗುತ್ತವೆ. ಧ್ಯಾನವು ಮನಸ್ಸಿನ ಏಕಾಗ್ರತೆಯಿಂದ ಮಾತ್ರ ಸಾಧ್ಯ.

ಪತಂಜಲಿ ಮಹರ್ಷಿಗಳು ಯೋಗಸೂತ್ರಗಳನ್ನು ಬರೆದಿದ್ದಾರೆ. ಇದರ ಅನುಷ್ಠಾನವನ್ನು ರಾಜಯೋಗವೆಂದು ಕರೆಯುತ್ತಾರೆ. ಇದಕ್ಕೆ ಅಷ್ಟಾಂಗ ಯೋಗವೆಂತಲೂ ಹೆಸರು. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ -ಇವುಗಳನ್ನು ಅಷ್ಟಾಂಗಗಳೆಂದು ಕರೆಯುತ್ತಾರೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group