ಯೋಗ

ಯೋಗದ ವಿವರಣೆ
ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಒಂದು ಸಂತುಲಿತ ರೀತಿಯಲ್ಲಿ ಸುಧಾರಿಸಲು ಅಥವಾ ವೃದ್ಧಿಪಡಿಸಲು ಇರುವ ಒಂದು ವಿಧಾನ. ಅದು ಸಂಪೂರ್ಣ ಸ್ವ-ಸಾಫಲ್ಯ ಪಡೆಯುವ ಒಂದು ಹಾದಿಯನ್ನು ಒದಗಿಸುತ್ತದೆ. ಯೋಗ ಎನ್ನುವ ಸಂಸ್ಕೃತ ಪದದ ಅರ್ಥ “ಸಂಧಿ” ಅಥವಾ “ಕೂಟ”. ಆದುದರಿಂದ ಯೋಗವನ್ನು ವೈಯಕ್ತಿಕ ಆತ್ಮವನ್ನು ಭಗವಂತನ ವಿಶ್ವಾತ್ಮದೊಂದಿಗೆ ಸಂಧಿಯಾಗುವಂತೆ ಮಾಡುವುದು ಎಂದು ವಿವರಿಸಬಹುದು. ಪತಂಜಲಿ ಮಹಾಋಷಿಯವರು ಹೇಳುವಂತೆ, ಯೋಗ ಎನ್ನುವುದು ಮನಸ್ಸಿನ ಮಾರ್ಪಾಡನ್ನು ಹತ್ತಿಕ್ಕುವ ಕ್ರಿಯೆಯಾಗಿದೆ.
ಯೋಗಒಂದು ಸಾರ್ವತ್ರಿಕ ಪ್ರಾಯೋಗಿಕ ವಿಧಾನ
ಯೋಗವು ತನ್ನ ಆಚರಣೆ ಹಾಗೂ ಅಳವಡಿಸುವಿಕೆಯಲ್ಲಿ, ಯಾವುದೇ ಸಂಸ್ಕೃತಿ, ರಾಷ್ಟ್ರೀಯತೆ, ಜನಾಂಗ, ಜಾತಿ, ಮತ, ಲಿಂಗ ಅಥವಾ ದೈಹಿಕ ಸ್ಥಿತಿಯ ಬೇಧವಿಲ್ಲದೆ, ಸ್ವಭಾವತಃ ಸಾರ್ವತ್ರಿಕವಾಗಿದೆ. ಕೇವಲ ಶಾಸ್ತ್ರಗ್ರಂಥಗಳನ್ನು ಓದುವುದರಿಂದಲಾಗಲೀ, ಅಥವಾ ಓರ್ವ ವಿರಾಗಿಯ ವೇಷ ಭೂಷಣಗಳನ್ನು ಧರಿಸುವುದರಿಂದಲಾಗಲೀ ಕುಶಲ ಯೋಗಿಯಾಗಲು ಸಾಧ್ಯವಿಲ್ಲ. ಆಚರಣೆಯಿಲ್ಲದೆ, ಯೋಗದ ತಂತ್ರಗಳ ಬಳಕೆಯ ಕುರಿತು ಅರಿತುಕೊಳ್ಳಲು ಅಥವಾ ಅದರಲ್ಲಿ ಸುಪ್ತವಾಗಿರುವ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಕೇವಲ ನಿರಂತರ ಆಚರಣೆ (ಸಾಧನೆ) ಯಿಂದ ಮಾತ್ರ ದೇಹ ಹಾಗೂ ಮನಸ್ಸಿನೊಳಗೆ ಅವುಗಳನ್ನು ಮೇಲಕ್ಕೆತ್ತುವ ಒಂದು ವಿನ್ಯಾಸವನ್ನು ರಚಿಸಲು ಸಾಧ್ಯ. ಅದಕ್ಕೆ ಸಾಧಕರ ಕಡೆಯಿಂದ ಮನಸ್ಸಿನ ಸಾಧನೆಯ ಮೂಲಕ ಹಾಗೂ ಪ್ರಜ್ಞೆಯನ್ನು ಪರಿಶುದ್ಧಗೊಳಿಸುವ ಮೂಲಕ ಸಂಪೂರ್ಣ ಉನ್ನತ ಮಟ್ಟದ ಪ್ರಜ್ಞೆಯನ್ನು ಅನುಭವಿಸುವ ತೀಕ್ಷ್ಣವಾದ ಬಯಕೆಯ ಅಗತ್ಯವಿದೆ.
ವಿಕಾಸದ ಪ್ರಕ್ರಿಯೆಯಾಗಿ ಯೋಗ
ಮಾನವನ ಪ್ರಜ್ಞೆ ಯಾ ಆತ್ಮಶಕ್ತಿಯ ಅಭಿವೃದ್ಧಿಯಲ್ಲಿ ಯೋಗವು ವಿಕಾಸವಾಗುತ್ತಿರುವ ಪ್ರಕ್ರಿಯೆಯಾಗಿದೆ. ಸಮಗ್ರ ಪ್ರಜ್ಞೆ ಯಾ ಅರಿವು/ ತಿಳುವಳಿಕೆಯು ಯಾವುದೇ ನಿರ್ದಿಷ್ಟ ವ್ಯಕ್ತಿಯಲ್ಲಿ ವಿಕಾಸವಾಗಬೇಕಿಲ್ಲ. ಅದಕ್ಕಿಂತ ಹೆಚ್ಚಾಗಿ ಅದು ವ್ಯಕ್ತಿಯು ಪ್ರಜ್ಞಾಪೂರ್ವಕವಾಗಿ ಬಯಸಿದಲ್ಲಿ ಮಾತ್ರ ಆರಂಭವಾಗುತ್ತದೆ. ಮದ್ಯ ಮತ್ತು ಮಾದಕದ್ರವ್ಯದ ಚಟಗಳು, ಅತಿಯಾಗಿ ಕೆಲಸಮಾಡುವುದು, ಅತಿಯಾದ ಲೈಂಗಿಕ ಚಟುವಟಿಕೆ, ಹಾಗೂ ವಿಸ್ಮೃತಿಗಾಗಿ ಇತರ ಚಟುವಟಿಕೆಗಳಲ್ಲಿ ತೊಡಗುವುದು ಅರಿವಿನಿಂದ ದೂರ ಸರಿಯುವಂತೆ ಮಾಡುತ್ತವೆ. ಭಾರತೀಯ ಯೋಗಿಗಳು ಆರಂಭಿಸುವುದು ಪಾಶ್ಚಿಮಾತ್ಯ ಮನೋವಿಜ್ಞಾನದ ಕೊನೆಯ ಹಂತದಿಂದ. ಫ್ರಾಯ್ಡನ ಮನೋವಿಜ್ಞಾನವು ಖಾಯಿಲೆಗಳ ಮನೋವಿಜ್ಞಾನವಾಗಿಯೂ, ಮಾಸ್ಲೋವಿನ ಮನೋವಿಜ್ಞಾನವು ಆರೋಗ್ಯಯುತ ಮಾನವನ ಮನೋವಿಜ್ಞಾನವಾಗಿಯ ಇದ್ದರೆ, ಭಾರತೀಯ ಮನೋವಿಜ್ಞಾನವು ಜ್ಞಾನೋದಯದ ಮನೋವಿಜ್ಞಾನವಾಗಿದೆ. ಯೋಗದಲ್ಲಿ, ಅದು ಮಾನವನ ಮನೋವಿಜ್ಞಾನದ ಪ್ರಶ್ನೆಯಾಗಿರುವುದಿಲ್ಲ, ಬದಲಾಗಿ, ಆತನ, ಆಧ್ಯಾತ್ಮಿಕ ಬೆಳವಣಿಗೆ ಪ್ರಶ್ನೆಯಾಗಿರುತ್ತದೆ.
ಆಧ್ಯಾತ್ಮ ಚಿಕಿತ್ಸೆಯಾಗಿ ಯೋಗ
ಯೋಗದ ಎಲ್ಲಾ ಹಾದಿಗಳು (ಜಪ, ಕರ್ಮ, ಭಕ್ತಿ, ಇತ್ಯಾದಿ) ನೋವಿನಿಂದ ಮುಕ್ತಿ ನೀಡುವ ನಿವಾರಕ ಪರಿಣಾಮದ ಸಂಭವನೀಯತೆಯನ್ನು ಒಳಗೊಂಡಿವೆ. ಆದರೆ, ಮುಖ್ಯವಾಗಿ, ಒಬ್ಬರಿಗೆ, ಇಂತಹ ಅಂತಿಮ ಗುರಿಯನ್ನು ತಲಪಲು ಇದೇ ಹಾದಿಯಲ್ಲಿ ಸಾಗಿದ ಅನುಭವವಿರುವ ಪರಿಣತರಿಂದ ಸರಿಯಾದ ಮಾರ್ಗದರ್ಶನದ ಅಗತ್ಯವಿರುತ್ತದೆ. ತನಗೆ ಯುಕ್ತವಾದ ಮಾರ್ಗವನ್ನು, ಪರಿಣತರೊಂದಿಗೆ ಆತ್ಮಸಮಾಲೋಚನೆಯ ಮೂಲಕ ಅಥವಾ ಈಗಾಗಲೇ ಈ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಯೋಗಿಯ ಜೊತೆಗೆ ಸಮಾಲೋಚನೆ ನಡೆಸಿ, ಜಾಗರೂಕವಾಗಿ ಆರಿಸಬೇಕಾಗುತ್ತದೆ.