ಯಾವ ಹಣ್ಣು ತಿಂದೆ ಇದ್ರು ಪರವಾಗಿಲ್ಲ ಪ್ರತಿದಿನ ಸೀಬೆ ಹಣ್ಣು ತಿನ್ನಿ: ಏಕೆ ಗೊತ್ತಾ?

ಸೀಬೆ ಹಣ್ಣು ತಿನ್ನುವುದರಿಂದ ಹಲ್ಲಿನ ಸಮಸ್ಯೆ ನಿವಾರಣೆಯಾಗುತ್ತೆ.
ಸೀಬೆ ಹಣ್ಣಿನ ಬೀಜ ತೆಗೆದು, ಜೇನುತುಪ್ಪ ಬೆರಸಿ ಸೇವಿಸುವುದು ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು.
ಇದರಲ್ಲಿನ ಕಾರ್ಬೋಹೈಡ್ರೇಟ್ಸ್ ಹಾಗೂ ನಾರಿನಾಂಶ ತೂಕ ಇಳಿಸುವಲ್ಲಿ ಸಹಕಾರಿಯಾಗಲಿದೆ.
ಇದರಲ್ಲಿನ ವಿಟಮಿನ್ ಎ,ಬಿ,ಸಿ ಅಂಶಗಳು ಚರ್ಮದ ಕಾಂತಿ ಹೆಚ್ಚಾಗಲಿದೆ.
ಸೀಬೆ ಹಣ್ಣಿನ ಎಲೆಯನ್ನು ರುಬ್ಬಿ ಮೈಗೆ ಹಚ್ಚಿ ಸ್ನಾನ ಮಾಡುವುದರಿಂದ ಕ್ರಮೇಣ ಬೆವರು ವಾಸನೆ ಕಡಿಮೆಯಾಗುತ್ತದೆ.
ಇದರಿಂದ ಮೊಡವೆಗಳು ಕಡಿಮೆಯಾಗುತ್ತದೆ.
ಸೀಬೆ ಹಣ್ಣು ಸೇವಿಸುವುದರಿಂದ ಬಾಯಿಯ ದುರ್ವಾಸನೆ ಹಾಗೂ ವಸಡಿನಲ್ಲಿ ರಕ್ತಸ್ರಾವ ಕಡಿಮೆಯಾಗುತ್ತೆ.
ಶೀತ, ತಲೆ ನೋವಿಗೆ ಸೀಬೆ ಹಣ್ಣು ಹೆಚ್ಚು ಪರಿಣಾಮಕಾರಿ.
ಆಹಾರದಲ್ಲಿ ಸೀಬೆಹಣ್ಣು ಸೇವಿಸುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.