ನಿಮ್ಮ ಮನೆಯ ಪಾಟ್ಗಳಲ್ಲೇ ಟೊಮ್ಯಾಟೋ ಬೆಳೆಯಬಹುದು, ಈ ಸ್ಟೆಪ್ಸ್ ಅನುಸರಿಸಿ…

ಟೊಮ್ಯಾಟೋ

ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಟೊಮ್ಯಾಟೊ ಗೊಜ್ಜು, ಟೊಮ್ಯಾಟೊ ಬಾತ್ ತಿನ್ನೋರನ್ನ ಶ್ರೀಮಂತರು ಅಂತ ಹೇಳೋ ಸಮಯ ಬಂದಿದೆ. ಹೀಗಿರುವಾಗ ದುಡ್ಡು ಹೆಚ್ಚಾಯ್ತು ಅಂತ ಟೊಮ್ಯಾಟೊ ತಿನ್ನೋದು ಬಿಡೋಕಾಗತ್ತ? ಖಂಡಿತಾ ಇಲ್ಲ, ಒಂದು ಕೆ.ಜಿ ಬದಲು ಅರ್ಧ ಕೆ.ಜಿ, ಸಾರಿಗೆ ಒಂದು ಟೊಮ್ಯಾಟೊ ಬದಲು ಅರ್ಧ ಟೊಮ್ಯಾಟೊ. ಇಷ್ಟೆಲ್ಲಾ ತಲೆ ಓಡಿಸೋ ನಾವು ಮನೆಯಲ್ಲೇ ಟೊಮ್ಯಾಟೊ ಗಿಡಗಳನ್ನು ಯಾಕೆ ಹಾಕಬಾರದು? ಈಗೇನೋ ಟೊಮ್ಯಾಟೊ ಬೆಲೆ ಕಡಿಮೆಯಾಯ್ತು. ಆದರೆ ಮತ್ತೆ ದುಬಾರಿ ಆಗಬಾರದು ಅಂತೇನಿಲ್ಲ ಅಲ್ವಾ?
ಟೊಮ್ಯಾಟೊ ಮನೆಯಲ್ಲೇ ಬೆಳೆಯೋದು ಹೀಗೆ..

ಮೊದಲು ಟೊಮ್ಯಾಟೊ ಅರ್ಧಕ್ಕೆ ಕತ್ತರಿಸಿ, ಅದರ ಒಳಗಿನ ಬೀಜಗಳನ್ನು ಬಾಕ್ಸ್ಗೆ ಹಾಕಿ.

ನಂತರ ಈ ಡಬ್ಬಿ ಮುಚ್ಚಿ, ಬಿಸಿಲಿಲ್ಲದ ಸ್ಥಳದಲ್ಲಿ ಇಡಿ.

ಎರಡು, ಮೂರು ದಿನದಲ್ಲಿ ಇದರ ಮೇಲೆ ಬಿಳಿ ಲೇಯರ್ ಸೃಷ್ಟಿಯಾಗುತ್ತದೆ.

ನಂತರ ಇದಕ್ಕೆ ನೀರು ಹಾಕಿ, ಬೀಜ ಕೆಳಗೆ ಸೆಟಲ್ ಆಗಲು ಬಿಡಿ.

ನಂತರ ನೀರು ತೆಗೆದು ಬೀಜಗಳನ್ನು ತೆಳುವಾದ ಬಟ್ಟೆ ಮೇಲೆ ಹರಡಿ.

ನಂತರ ಈ ಬೀಜಗಳನ್ನು ತೆಗೆದು ಡಬ್ಬಿಗೆ ಹಾಕಿ, ತಣ್ಣಗಿನ, ಬೆಳಕು ಬಾರದ ಜಾಗದಲ್ಲಿ ಇಡಿ.

ಇದಾದ ಆರು ವಾರಗಳ ನಂತರ ಬೀಜಗಳನ್ನು ಮಣ್ಣಿಗೆ ಹಾಕಬಹುದು.

ಪಾಟ್ನಲ್ಲಿ ಮುಕ್ಕಾಲು ಭಾಗ ಮಣ್ಣು ಹಾಕಿ.

ಈದರಲ್ಲಿ ಹೆಚ್ಚು ಬೀಜಗಳನ್ನು ಹಾಕಬೇಡಿ, ಗಿಡಗಳಿಗೆ ಸಾಕಷ್ಟು ಜಾಗ ಸಿಗಲಿ.

ಮೊಳಕೆ ಕಂಡ ನಂತರ ಹೆಚ್ಚು ನೀರು ಅವಶ್ಯವಿಲ್ಲ. ಟೊಮ್ಯಾಟೊ ಗಿಡಗಳು ಬೇಗನೆ ಬೆಳವಣಿಗೆ ಹೊಂದುತ್ತವೆ.

ಈ ಗಿಡಗಳು ಆರು ಇಂಚಿನಷ್ಟು ಉದ್ದ ಬೆಳೆದಮೇಲೆ ಇವನ್ನು ಪಾಟ್ನಿಂದ ತೆಗೆದು ಮಣ್ಣಿಗೆ ಹಾಕಬಹುದು.

ಗಿಡ ಉದ್ದಕ್ಕೆ ಬೆಳೆಯಲು ಅದಕ್ಕೊಂದು ಕೋಲು ಕಟ್ಟಿಬಿಡಿ.

ಬಿಸಿಲು ಬರುವ ಜಾಗದಲ್ಲಿ ಗಿಡಗಳನ್ನು ನೆಡಬೇಕು.

ದಿನವೂ ಗಿಡಕ್ಕೆ ನೀರು ಹಾಕಿ. ಗಿಡಗಳನ್ನು ಟ್ರಿಮ್ ಮಾಡೋದು ಮರೆಯಬೇಡಿ.

ಇದಾದ ಒಂದು ಅಥವಾ ಎರಡು ತಿಂಗಳ ನಂತರ ಟೊಮ್ಯಾಟೊ ಬೆಳವಣಿಗೆ ಆರಂಭವಾಗುತ್ತದೆ.

Share this Article
Subscribe
Notify of
guest
0 Comments
Inline Feedbacks
View all comments
error:

Join Our

Group