ಚಳಿಗಾಲದಲ್ಲಿ ಆರೋಗ್ಯ ಕೆಡಬಾರದೆಂದರೆ ಹೀಗೆ ಮಾಡಿ.. ಉಪಯೋಗಕರ ಟಿಪ್ಸ್ ಇಲ್ಲಿದೆ…

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳೋದು ತುಂಬಾನೇ ಕಷ್ಟ. ಶೀತ, ಜ್ವರ ಮತ್ತು ಕೆಮ್ಮು ಬರುತ್ತದೆ. ಚಳಿಗಾಲದಲ್ಲಿ ಆರೋಗ್ಯ ಕಾಪಾಡೋಕೆ ಈ ರೀತಿ ಮಾಡಿ..
ಆರೋಗ್ಯಕ ತಿಂಡಿಗಳನ್ನು ಸೇವಿಸಿ, ಹಣ್ಣು-ತರಕಾರಿ ಹೆಚ್ಚು ಸೇವಿಸಿ.
ಚಳಿಗಾಲದ ಸಮಯದಲ್ಲಿ ರಾತ್ರಿ ಹೊತ್ತು ಹೆಚ್ಚು ಚಳಿ ಇರುವ ಕಾರಣ ಆಗ ಓಡಾಟ ಕಡಿಮೆ ಮಾಡಿ.
ಯಾವಾಗಲೂ ದೇಹ ಹೈಡ್ರೇಟ್ ಆಗಿರಲಿ.
ಚೆನ್ನಾಗಿ ನಿದ್ದೆ ಮಾಡುವುದು ಮರೆಯಬೇಡಿ.
ಬೆಚ್ಚಗಿನ ಆಹಾರ, ಬೆಚ್ಚಗಿನ ಬಟ್ಟೆ ಕಡ್ಡಾಯ.
ಹೊರಗೆ ಹೋಗುವಾಗ ಸ್ವೆಟರ್ಸ್ ಹಾಗೂ ಕಿವಿಗೆ ಗಾಳಿ ಹೋಗದಂತೆ ಹತ್ತಿ ಬಳಸಿ.
ವ್ಯಾಯಾಮ ಮಾಡಲು ಸೋಂಬೇರಿತನ ಬಂದರೂ ವ್ಯಾಯಾಮ ಮಾಡುವುದು ತಪ್ಪಿಸಬೇಡಿ.
ಚಳಿಗಾಲದಲ್ಲಿ ಸ್ಕಿನ್ ಹಾಗೂ ಕೂದಲು ತುಂಬಾನೇ ಡ್ಯಾಮೇಜ್ ಆಗುತ್ತದೆ. ಇದರ ಬಗ್ಗೆ ಗಮನ ಇರಲಿ.
ಆಗಾಗ ಕೈ ತೊಳೆಯುವುದು, ಬಿಸಿನೀರು ಕುಡಿಯುವುದು ರೂಢಿ ಮಾಡಿ.
ಶೀತ, ಜ್ವರಕ್ಕೆ ನೀವೇ ಮಾತ್ರೆ ತೆಗೆದುಕೊಳ್ಳದೇ ವೈದ್ಯರನ್ನು ಭೇಟಿ ಮಾಡಿ.